ದಸರಾ ನೋಡಲು ಬರಬೇಡಿ; ಅಂಗಲಾಚಿದ ಮೈಸೂರು ಜಿ.ಪಂ. ಸಿಇಒ

mysore
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮೈಸೂರು(13/10/2020): ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ  ದಯವಿಟ್ಟು ಈ ಬಾರಿ ದಸರಾ ನೋಡಲು ಬರಬೇಡಿ ಎಂದು ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ ಡಿ.ಭಾರತಿ ಅಂಗಲಾಚಿದ್ದಾರೆ.

ಕೋವಿಡ್ 19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ದಸರಾದಲ್ಲಿ ಸಾರ್ವಜನಿಕರಿಗೆ ಜಂಬೂಸವಾರಿ ಮೆರವಣಿಗೆ ಇರುವುದಿಲ್ಲ. ಆದರೆ, ಅರಮನೆಗೆ ಮಾತ್ರ ಸೀಮಿತವಾಗಿ ಜಂಬೂಸವಾರಿ ನಡೆಯಲಿದೆ. ಆದ್ದರಿಂದ  ಜನರು ಮೈಸೂರು ನಗರಕ್ಕೆ ಬರಬೇಡಿ. ಎಲ್ಲರೂ ಮನೆಯಲ್ಲೇ ಇದ್ದು ಟಿ.ವಿ.ಗಳಲ್ಲಿ ದಸರಾ ನೋಡಿ ಎಂದು ಅವರು ವಿನಂತಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು