ಗುಜರಾತ್: ದನದ ಉಚ್ಚೆ, ಸೆಗಣಿ ಮತ್ತು ಹಾಲಿನ ಬಗ್ಗೆ ಸಂಶೋಧನೆ ನಡೆಸುವ ಸಂಸ್ಥೆ ಅಸ್ತಿತ್ವಕ್ಕೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ವಡೋದರ: ದನದ ಉಚ್ಚೆ, ಸೆಗಣಿ ಮತ್ತು ಹಾಲಿನ ಬಗ್ಗೆ ಸಂಶೋಧನೆ ನಡೆಸುವ ಸಂಸ್ಥೆಯೊಂದನ್ನು ಗುಜರಾತಿನಲ್ಲಿ ಸ್ಥಾಪಿಸಲಾಗಿದೆ. ತಾಂತ್ರಿಕ ವಿಶ್ವವಿದ್ಯಾಲಯದ ಅಧೀನದಲ್ಲಿ ಸ್ಥಾಪಿಸಲಾದ ಸಂಸ್ಥೆಯು ರಾಷ್ಟ್ರೀಯ ಕಾಮಧೇನು ಆಯೋಗದ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಲಿದೆ.

ಗೋಮೂತ್ರ ಬಳಸಿ ಗೊಬ್ಬರ ತಯಾರಿಕೆ, ಸ್ವದೇಶಿ ಪಶು ತಳಿಗಳ ಕುರಿತು ಸಂಶೋಧನೆ, ಕೀಟ ನಾಶಕಗಳ ಉತ್ಪಾದನೆ ಇತ್ಯಾದಿ ವಿಷಯಗಳಲ್ಲಿ ಸಂಸ್ಥೆಯು ಅಧ್ಯಯನ ನಡೆಸಲಿದೆ. ಗುಜರಾತ್ ರಾಜ್ಯಪಾಲ ಆಚಾರ್ಯ ದೇವ್ರತ್ ನಿನ್ನೆಯಷ್ಟೇ ಈ ಸಂಶೋಧನಾ ಕೇಂದ್ರದ ಉದ್ಘಾಟನೆಯನ್ನು ಆನ್ಲೈನ್ ಮೂಲಕ ನೆರವೇರಿಸಿದರು. ಸಂಸ್ಥೆಯ ಮೂಲಕ ನೂರಾರು ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶ ಸಿಗಲಿದೆಯೆಂದು ಉದ್ಘಾಟನೆಯ ವೇಳೆಯಲ್ಲಿ ಆಚಾರ್ಯ ತಿಳಿಸಿದರು.

ದನಗಳ ಕುರಿತಾಗಿಯೋ, ಅವುಗಳು ನೀಡುವ ವಸ್ತುಗಳ ಕುರಿತಾಗಿಯೋ ಸರಿಯಾದ ಸಂಶೋಧನೆಗಳು ಇನ್ನೂ ನಡೆದಿಲ್ಲ. ಹಾಗಾಗಿ ಪರಂಪರಾಗತ ಜ್ಞಾನವನ್ನು, ವೈಜ್ಞಾನಿಕ ವಿಧಾನದ ಮೂಲಕ ಹೇಗೆ ಬಳಸಿಕೊಳ್ಳಬಹುದು ಎಂಬ ಕುರಿತು ತಿಳಿದುಕೊಳ್ಳಲು ಇಂತಹಾ ಸಂಶೋಧನಾ ಕೇಂದ್ರದಿಂದ ಸಾಧ್ಯವಾಗಬಹುದು ಎಂದು ಗುಜರಾತ್ ತಾಂತ್ರಿಕ ವಿಶ್ವವಿದ್ಯಾಲಯದ ವೈಸ್ ಚಾನ್ಸಲರ್ ನವೀನ್ ಸೆಫ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಆಡಳಿತದ ಒಕ್ಕೂಟ ಸರಕಾರವು ದನದ ಮೂತ್ರ ಮತ್ತು ಸೆಗಣಿಯನ್ನು ಮದ್ದಿಗಾಗಿ ಬಳಸಿಕೊಳ್ಳಲು ಪ್ರೋತ್ಸಾಹ ನೀಡುತ್ತಿದೆ. ಆಯುಶ್ ಸಚಿವಾಲಯದ ಮೂಲಕವೂ ಇದು ನಡೆಯುತ್ತಿದೆ. ಆದರೆ ದನದ ವಿಸರ್ಜನೆಯನ್ನು ಔಷಧಿಯಾಗಿ ಬಳಸುವುದಕ್ಕೆ ವೈಜ್ಞಾನಿಕ ಸಾಕ್ಷ್ಯಾಧಾರಗಳು ವರೆಗೂ ದೊರೆತಿಲ್ಲ. ಅಲ್ಲದೇ ಇವುಗಳನ್ನು ಚಿಕಿತ್ಸೆಗೆ ಬಳಸಿದರೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದೆಂದು ಹಲವು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು