ಚೆನ್ನೈ(06-10-2020): 35 ವರ್ಷದ ದಲಿತ ಶಾಸಕ ಬ್ರಾಹ್ಮಣ ಪಿಯುಸಿ ವಿದ್ಯಾರ್ಥಿನಿಯನ್ನು ವಿವಾಹವಾಗಿದ್ದು, ವಿದ್ಯಾರ್ಥಿನಿಯ ತಂದೆ ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆ ತಮಿಳುನಾಡಿನ ಕಲ್ಲಕುರಿಟಿಯಲ್ಲಿ ನಡೆದಿದ್ದು ಚರ್ಚೆಗೆ ಗ್ರಾಸವಾಗಿದೆ.
ಶಾಸಕ ಪ್ರಭು 19 ವರ್ಷದ ಸೌಂದರ್ಯ ಎಂಬಾಕೆಯನ್ನು ಪ್ರೀತಿಸುತ್ತಿದ್ದರು. ಇಂದು ಶಾಸಕರ ಮನೆಯಲ್ಲಿ ವಿವಾಹವಾಗಿದ್ದಾರೆ. ಶಾಸಕ ಮದುವೆಗೆ ತಮ್ಮ ಮಗಳನ್ನು ಮೋಸದಿಂದ ತನ್ನ ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡಿದ್ದಾನೆ. ಅ.1 ರಂದು ಸೌಂದರ್ಯಳನ್ನು ಅಪಹರಿಸಿದ್ದಾನೆ ಎಂದು ಸೌಂದರ್ಯ ತಂದೆ ಸ್ವಾಮಿನಾಥನ್ ಆರೋಪಿಸಿದ್ದಾರೆ.
ಸೌಂದರ್ಯ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಪ್ರಭು ಬಿ ಟೆಕ್ ಪದವೀಧರ. ಆಕೆಯ ತಂದೆ ತಮಗೆ ಜಾತಿಯ ಸಮಸ್ಯೆ ಇಲ್ಲ, ವಯಸ್ಸಿನ ಅಂತರವೇ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.