ಇಟಾ (18-11-2020): ಇಟಾ ಜಿಲ್ಲೆಯ ಮಾಜಿ ಗ್ರಾಮದ ಮುಖ್ಯಸ್ಥನೋರ್ವ ಇನ್ನಿಬ್ಬರ ಜೊತೆ ಸೇರಿ ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ಬಹಿರಂಗವಾಗಿದೆ.
ರಾಜೀವ್ ಎಂಬ ಮಾಜಿ ಗ್ರಾಮ ಪ್ರಧಾನ್ ಮತ್ತು ಅವನ ಇಬ್ಬರು ಸಹಾಯಕರಾದ ಅನಿಲ್ ಮತ್ತು ಆಕಾಶ್ ಅವರು ಶೌಚಾಲಯದೊಳಗೆ ಅತ್ಯಾಚಾರ ಮಾಡಿದ್ದಾರೆಂದು ಬಾಲಕಿ ಹೇಳಿದ್ದಾಳೆ. ಆರು ವರ್ಷದ ಮಗುವಿನೊಂದಿಗೆ ಮಲವಿಸರ್ಜನೆ ಮಾಡಲು ಹೋದಾಗ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.
ಸಂತ್ರಸ್ತೆ ಮತ್ತು ಆಕೆಯ ತಾಯಿ ಪೊಲೀಸ್ ಠಾಣೆಗೆ ತಲುಪಿದಾಗ, ಪೊಲೀಸರು ಅವರನ್ನು ನಿರ್ಲಕ್ಷಿಸಿದ್ದಾರೆ. ಬಳಿಕ ಸಂತ್ರಸ್ತೆ, ತಾಯಿ ಜೊತೆ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಲು ಅಲಿಗಂಜ್ ಗೆ ತೆರಳಿದ್ದಾರೆ.
ಬಹುಶಃ ಉನ್ನತ ಅಧಿಕಾರಿಗಳು ತಮ್ಮ ಮಾತನ್ನು ಕೇಳುತ್ತಾರೆ ಮತ್ತು ಮಗಳಿಗೆ ನ್ಯಾಯವನ್ನು ಕೊಡುತ್ತಾರೆ ಎಂದು ಕುಟುಂಬವು ಆಶಿಸಿತು, ಆದರೆ ಎಲ್ಲಾ ಪ್ರಯತ್ನಗಳು ವ್ಯರ್ಥವಾಯಿತು ಮತ್ತು ಇಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಸಂತ್ರಸ್ತೆಯ ಕುಟುಂಬಸ್ಥರು ಹೇಳಿದ್ದಾರೆ.