ದಲಿತ ವರನ ಮದುವೆ ಮೆರವಣಿಗೆ ಮೇಲೆ ಕಲ್ಲು ತೂರಿದ ಸವರ್ಣೀಯರು

groom dalith
Share on facebook
Share on twitter
Share on linkedin
Share on whatsapp
Share on telegram
Share on email
Share on print

ಗುಜರಾತ್(25-02-2021): ವಿವಾಹದಲ್ಲಿ ದಲಿತ ವರ ಸಾಂಪ್ರದಾಯಿಕ ಟೋಪಿ ಧರಿಸಿದಕ್ಕೆ ಗುಜರಾತ್‌ನ ಅರಾವಲಿ ಜಿಲ್ಲೆಯಲ್ಲಿ ಮದುವೆ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಲಾಗಿದೆ.

ಸವರ್ಣೀಯರು ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮೆರವಣಿಗೆಯಲ್ಲಿ ವರನ ಕೆಲವು ಸಂಬಂಧಿಕರು ಸಾಂಪ್ರದಾಯಿಕ ಟೋಪಿಗಳನ್ನು ಧರಿಸಿದ್ದರು, ಈ ಕಾರಣದಿಂದಾಗಿ ಸವರ್ಣಿಯರು ದಬ್ಬಾಳಿಕೆ ನಡೆಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಪ್ರಕಾರ, ಈವರೆಗೆ 9 ಜನರನ್ನು ಬಂಧಿಸಲಾಗಿದೆ ಎಂದು ಜನಸತ್ತಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮದುವೆ ಮೆರವಣಿಗೆ ಆರಂಭದ ತಕ್ಷಣವೇ ಕಲ್ಲು ತೂರಾಟ ಪ್ರಾರಂಭವಾಯಿತು. ಪೊಲೀಸರ ಪ್ರಕಾರ, ಮೇಲ್ಜಾತಿಗೆ ಸೇರಿದ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಮೆರವಣಿಗೆಯಲ್ಲಿ ದಲಿತ ಪುರುಷರು ಮತ್ತು ಮಹಿಳೆಯರು ‘ಸಫಾ’ (ಸಂಪ್ರದಾಯಿಕ ಉಡುಗೆ) ಧರಿಸುವುದನ್ನು ಆರೋಪಿಗಳು ಆಕ್ಷೇಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವರನ ಕುಟುಂಬದ ಸದಸ್ಯರು ಮತ್ತು ಇತರರನ್ನು ಕೊಲ್ಲುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತರ ಕಡೆಯಿಂದ ಆರೋಪಿಸಲಾಗಿದೆ. ಮದುವೆಯ ಸಂದರ್ಭದಲ್ಲಿ ಡಿಜೆ ಸಂಗೀತ ಹಾಕದಂತೆ ಕೂಡ ಬೆದರಿಕೆ ಹಾಕಲಾಗಿದೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು