ಇಂದೋರ್(21-01-2021): ಎರಡು ಕ್ರೂರ ಅತ್ಯಾಚಾರ ಪ್ರಕರಣಗಳು ಮಧ್ಯಪ್ರದೇಶವನ್ನು ಮತ್ತೊಮ್ಮೆ ಬೆಚ್ಚಿಬೀಳಿಸಿದೆ. 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಕಲ್ಲಿನಿಂದ ಹೊಡೆದು ಜೀವಂತವಾಗಿ ಹೂಳಲು ಯತ್ನಿಸಲಾಗಿದೆ. ಇಂದೋರ್ನಲ್ಲಿ, 19 ವರ್ಷದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ, ಇರಿತ ನಡೆಸಿ ಚೀಲದಲ್ಲಿ ತುಂಬಿಸಿ ರೈಲ್ವೆ ಹಳಿಗಳ ಮೇಲೆ ಎಸೆಯಲಾಗಿದೆ.
14 ವರ್ಷದ ಬಾಲಕಿ ಬೆತುಲ್ನ ಹಳ್ಳಿಯೊಂದರ ಜಮೀನೊಂದಕ್ಕೆ ಮೋಟಾರು ಸ್ವಿಚ್ ಆಫ್ ಮಾಡಲು ಹೋಗಿದ್ದಳು ಮತ್ತು ಅವಳು ಏಕಾಂಗಿಯಾಗಿರುವುದನ್ನು ಗಮನಿಸಿದ ಆರೋಪಿಗಳು ಅತ್ಯಾಚಾರ ಮಾಡಿ ಅವಳನ್ನು ಕಲ್ಲುಗಳಿಂದ ಮುಚ್ಚಿ ಜೀವಂತವಾಗಿ ಹೂಳಲು ಪ್ರಯತ್ನಿಸಿದ್ದಾರೆ. ಬಾಲಕಿಯ ಕುಟುಂಬದ ಸದಸ್ಯರು ಅವಳನ್ನು ಹುಡುಕಲು ಹೋದಾಗ, ಅವರು ಕಲ್ಲುಗಳಿಂದ ಮುಚ್ಚಿದ ಗುಂಡಿಯಲ್ಲಿ ನೋವಿನಿಂದ ಬಳಲುತ್ತಿದ್ದರು ಎಂದು ಸ್ಥಳೀಯ ಪೊಲೀಸ್ ಠಾಣೆ ಉಸ್ತುವಾರಿ ಮಹೇಂದ್ರ ಸಿಂಗ್ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ 35 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ, ನಾವು ಐಪಿಸಿ ಸೆಕ್ಷನ್ ಅಡಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದೇವೆ, ಜೊತೆಗೆ ಎಸ್ಸಿ / ಎಸ್ಟಿ ದೌರ್ಜನ್ಯ (ತಡೆಗಟ್ಟುವಿಕೆ) ಕಾಯ್ದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಸಂತ್ರಸ್ತೆಯ ಖಾಸಗಿ ಭಾಗ, ದವಡೆಯಲ್ಲಿ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ನಾಗ್ಪುರ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿದೆ.
ಇನ್ನು ಇಂದೋರ್ ನ ಪ್ರಕರಣದಲ್ಲಿ, ಪೊಲೀಸ್ ದೂರಿನ ಪ್ರಕಾರ, ಯುವತಿಯ ಮಾಜಿ ಪ್ರೇಮಿ ಯುವತಿಯನ್ನು ನಂದಿಗ್ರಾಮ್ ನ ಫ್ಲ್ಯಾಟ್ಗೆ ಕರೆದೊಯ್ದನು, ಅಲ್ಲಿ ಅವನು ತನ್ನ ಸ್ನೇಹಿತರೊಂದಿಗೆ ಸೇರಿ ಗ್ಯಾಂಗ್ ರೇಪ್ ಮಾಡಿದ್ದಾನೆ. ಬಳಿಕ ಯುವತಿಯನ್ನು ಚೀಲದಲ್ಲಿ ತುಂಬಿಸಿ ಭಾಗೀರಥಪುರದ ರೈಲ್ವೆ ಹಳಿಯಲ್ಲಿ ಎಸೆದಿದ್ದಾರೆ.