ಚೆನ್ನೈ(16/11/2020): ತಮಿಳುನಾಡಿನ ಮೇಲ್ಜಾತಿಯ ಯುವಕನೊಬ್ಬ ದಲಿತ ದಂಪತಿಗಳನ್ನು ಹತ್ಯೆ ಮಾಡಿದ ಆಘಾತಕಾರಿ ಸುದ್ದಿ ವರದಿಯಾಗಿದೆ.
55 ವರ್ಷದ ರಾಮಸ್ವಾಮಿ ಹಾಗೂ 48 ವರ್ಷದ ಅರುಕ್ಕುನಿ ಹತ್ಯೆಯಾದ ದಲಿತ ದಂಪತಿಗಳು. ಆರೋಪಿಯನ್ನು ಸೂರ್ಯ ಎಂದು ಗುರುತಿಸಲಾಗಿದ್ದು, ಈತ ಮೇಲ್ಜಾತಿಗೆ ಸೇರಿದವನು ಎಂದು ವರದಿಯಾಗಿದೆ.
ರಾಮಸ್ವಾಮಿ ಹಾಗೂ ಅರುಕ್ಕುನಿ ದಂಪತಿಗಳು ತಮ್ಮ ಮಗಳೊಂದಿಗೆ ನಡೆದು ಹೋಗುತ್ತಿದ್ದಾಗ ರಸ್ತೆಯ ಬದಿ ಪಟಾಕಿ ಸಿಡಿಸುತ್ತಿದ್ದ ಸೂರ್ಯ ಮಗಳನ್ನು ನೋಡಿ ಅಶ್ಲೀಲವಾಗಿ ಮಾತನಾಡಿದ್ದಾನೆ. ಇದನ್ನು ದಲಿತ ದಂಪತಿಗಳು ಪ್ರಶ್ನಿಸಿದ್ದಕ್ಕೆ ಸೂರ್ಯ ಹಾಗೂ ಆತನ ಗೆಳೆಯರು ದಂಪತಿಗಳ ಮನೆಗೆ ನುಗ್ಗಿಮಾರಕ ಆಯುಧಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ತಮಿಳುನಾಡಿನ ಇರೋಡಿ ಪೊಲೀಸರು ತಿಳಿಸಿದ್ದಾರೆ.