ಆಂಧ್ರಪ್ರದೇಶ (11-10-2020): ಭಾರತದಲ್ಲಿ ಜಾತಿ ಪೀಡೆ ಎಷ್ಟೇ ದೊಡ್ಡ ಹುದ್ದೆಗೆ ಏರಿದ್ರೂ ನಮ್ಮನ್ನು ಬೆನ್ನು ಹತ್ತಿಕೊಂಡು ಬರುತ್ತದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಆಂಧ್ರಪ್ರದೇಶದಿಂದ ವರದಿಯಾಗಿದೆ.
ಕದ್ದಲೂರಿನಲ್ಲಿ ಪಂಚಾಯತ್ ಅಧ್ಯಕ್ಷೆ ದಲಿತ ಮಹಿಳೆಯನ್ನು ರಾಷ್ಟ್ರಧ್ವಜವನ್ನು ಹಾರಿಸದಂತೆ ತಡೆದು ಬಳಿಕ ಸಭೆಯಲ್ಲಿ ನೆಲದಲ್ಲಿ ಕುಳ್ಳಿರಿಸಿ ಪಂಚಾಯತ್ ಉಪಾಧ್ಯಕ್ಷ ಮೋಹನ್ ರಾಜು ಎಂಬಾತ ಅಪಮಾನ ಮಾಡಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಪಂಚಾಯತ್ ಕಾರ್ಯದರ್ಶಿ ಸಿಂದುಜಾ ಮತ್ತು ವಾರ್ಡ್ ಸದಸ್ಯ ಆರ್ ಸುಗುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಪಂಚಾಯತ್ ಉಪಾಧ್ಯಕ್ಷ ತಲೆಮರೆಸಿಕೊಂಡಿದ್ದಾನೆ.