ಮಂಗಳೂರಿನ ಪತಿಯ ಪ್ಲಾಟ್ ನಲ್ಲಿ ಹಪೀಪಾ ಮೃತ ಸ್ಥಿತಿಯಲ್ಲಿ‌ ಪತ್ತೆ; ಕೊಲೆ‌ ಎಂದು ದೂರು ದಾಖಲು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಂಗಳೂರು: ಕಳೆದ ವಾರ ಮಂಗಳೂರಿನ ಪಳ್ನೀರ್ ಪ್ಲಾಟ್ ವೊಂದರಲ್ಲಿ
ಯುವತಿಯ ನಿಗೂಢ ಸಾವು ನಡೆದಿತ್ತು. ಈ ಬಗ್ಗೆ ಮೃತ ಯುವತಿಯ ತಂದೆ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಶಂಕಿಸಿ‌ ಪೊಲೀಸರಿಗೆ ದೂರು ನೀಡಿದ್ದಾರೆ.ಫಳ್ನೀರ್ ಫ್ಲ್ಯಾಟ್ ನ ಪತಿ ಮನೆಯಲ್ಲಿ ಹಫೀಫಾ (26) ಎಂಬ ಯುವತಿ ಜ.30ರಂದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದರು.ಅವರ ಪತಿ ಮಿಶಾಬ್ ಮತ್ತು ಆತನ ತಾಯಿ ರಝಿಯಾ ಕೊಲೆ ಮಾಡಿದ್ದಾರೆ ಎಂದು ಮೃತ ಯುವತಿಯ ತಂದೆ ಹಸನಬ್ಬ ದೂರು ದಾಖಲಿಸಿದ್ದಾರೆ.

ದೂರನ್ನು ಆಧರಿಸಿ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಬಂದರ್ ಕಸೈಗಲ್ಲಿ ನಿವಾಸಿ ಎಂ. ಹಸನಬ್ಬ ಅವರ ಪುತ್ರಿ ಆಯಿಶಾ ಹಫೀಫಾ ಮೃತಪಟ್ಟ ದಿನ
11.36ಕ್ಕೆ ತಾಯಿಗೆ ಕರೆ ಮಾಡಿ ಮಾತನಾಡಿದ್ದಳು. ಇನ್ನೆರಡು ಮೂರು ದಿನಗಳಲ್ಲಿ ಮಗಳು ಮತ್ತು ಅಳಿಯ ದುಬೈಗೆ ಹೋಗುವವರಿದ್ದರು. ಬಹಳ ಸಂತೋಷದಲ್ಲಿದ್ದ ಹಪೀಪ ದಿಡೀರ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪತಿ ಕರೆ ಮಾಡಿ ಹೇಳಿದ್ದ. ಈ ಬಗ್ಗೆ ಸಂಶಯ ಇದೆ ಎಂದು ಮೃತ ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು