ದಕ್ಷಿಣ ಭಾರತದಲ್ಲಿ ಬಿಎಸ್ ಪಿ ಪಕ್ಷದ ಮೊದಲ ಖಾತೆ ತೆರೆದ ಮಾಜಿ ಶಾಸಕ ಜುಲ್ಫೆಕರ್ ಹಾಸ್ಮಿ ನಿಧನ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೀದರ್: ಬಿಎಸ್ ಪಿ ಪಕ್ಷದ ಮಾಜಿ ಶಾಸಕ ಬೀದರಿನ ಜುಲ್ಫೆಕರ್ ಹಾಸ್ಮಿ (57) ಇಂದು ನಿಧನರಾಗಿದ್ದಾರೆ.

ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಹೈದರಾಬಾದ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರು, ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು, ಎರಡು ದಿನಗಳಿಂದ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಜುಲ್ಫೆಕರ್ ಹಾಸ್ಮಿ ಅವರು 27 ವಯಸ್ಸಿಗೆ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು, 30 ವರ್ಷ ವಯಸ್ಸಿಗೆ ಸಕ್ರಿಯವಾಗಿ ರಾಜಕೀಯ ಜೀವನಕ್ಕೆ ಕಾಲಿಟ್ಟ ಅವರು 1994 ರಲ್ಲಿ ಬಿಎಸ್ ಪಿ ಪಕ್ಷದಿಂದ ಬೀದರ್ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಹಾಸ್ಮಿ ಅವರು ‘ಶೇರ್ – ಎ-ಬೀದರ’ ಎಂದೇ ಖ್ಯಾತಿ ಪಡೆದಿದ್ದರು.

ದಕ್ಷಿಣ ಭಾರತದಲ್ಲಿ ಬಿಎಸ್ ಪಿ ಪಕ್ಷದಿಂದ ವಿಧಾನಸಭೆಗೆ ಮೊದಲ ವ್ಯಕ್ತಿ ಎಂದು ಪ್ರಸಿದ್ಧಿ ಪಡೆದಿದ್ದರು. ಅಂಬೇಡ್ಕರ್ ಸಿದ್ಧಾಂತವನ್ನು ಮೈಗೂಡಿಸಿಕೊಂಡಿದ್ದ ಹಾಸ್ಮಿ ಅವರು ಪ್ರಖರ ವಾಗ್ಮಿ ಆಗಿದ್ದರು, ನಂತರ ಜೆಡಿಎಸ್ ದಿಂದ ಸ್ಪರ್ಧಿಸಿ ಸೋತರು, ಆನಂತರ ಕಾಂಗ್ರೆಸ್ ನಲ್ಲಿ ಕೆಲಕಾಲ ಉಳಿದಿದ್ದರು. ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಸಹಕಾರ ಮನೋಭಾವದ ವ್ಯಕ್ತಿ, ತಮ್ಮ ಮೊನಚಾದ ಭಾಷಣಗಳ ಮೂಲಕ ಹಲವು ವಿವಾದಗಳಿಗೂ ಸಾಕ್ಷಿಯಾಗಿದ್ದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು