ತಂದೆ-ತಾಯಿಗೆ ಬೇರೆ-ಬೇರೆ ಮದುವೆ| ಅಡ್ಡಿಯಾಗಿದ್ದ ಇಬ್ಬರು ಮಕ್ಕಳ ಮಾರಾಟ

urine
Share on facebook
Share on twitter
Share on linkedin
Share on whatsapp
Share on telegram
Share on email
Share on print

ಒಡಿಶಾ(14-10-2020): ಅಪ್ಪ-ಅಮ್ಮ ಬೇರೆ-ಬೇರೆ ಮದುವೆಯಾಗಲು ಇಬ್ಬರು ಮಕ್ಕಳನ್ನು ಮಾರಾಟ ಮಾಡಿರುವ ಅಪರೂಪದ ಘಟನೆ ಒಡಿಶಾದ ಬುಡಕಟ್ಟು ಜಿಲ್ಲೆ ಮಲ್ಕಂಗಿರಿಯಲ್ಲಿ ವರದಿಯಾಗಿದೆ.

ಮಲ್ಕಂಗಿರಿಯ ಬಸುದೇವನ್ ಎಂಬ ಅನಾಥ ಯುವಕನ ಬಗ್ಗೆ ವಿಚಾರಿಸಿದಾಗ ಬಹಿರಂಗವಾದ ಸುದ್ದಿ ಇದು. ಬಸುದೇವನ ತಂದೆ-ತಾಯಿ ಇಬ್ಬರೂ ಬೇರೆ ಬೇರೆ ಮದುವೆಯಾಗಲು ಬಯಸಿದ್ದರು. ಅದಕ್ಕಾಗಿ ಮೊದಲು ತಮ್ಮನನ್ನು ಮಾರಾಟ ಮಾಡಿದ್ದಾರೆ. ಬಳಿಕ ಬಸುದೇವನನ್ನು ಮಾರಾಟ ಮಾಡಿ ತಂದೆ-ತಾಯಿ ಇಬ್ಬರು ಕೂಡ ಬೇರೆ-ಬೇರೆ ಮದುವೆಯಾಗಿ ಸುಖ ಜೀವನವನ್ನು ನಡೆಸುತ್ತಿದ್ದಾರೆ.

ಆದರೆ ಬಸುದೇವ್ ಗೆ 9ವರ್ಷ ವಯಸ್ಸಾಗಿದೆ. ಈತ ತನ್ನನ್ನು ಕೊಂಡುಕೊಂಡಿದ್ದ ಮನೆಯಲ್ಲಿ ಜೀತ ಮಾಡುತ್ತಿದ್ದ. ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಹೋಗಿ ಜಯಂತಿ ಎಂಬವರ ಕೈಗೆ ಸಿಕ್ಕಿದ್ದ. ಬಳಿಕ ಸ್ಥಳೀಯ ಆಡಳಿತಕ್ಕೆ ಮಾಹಿತಿ ತಿಳಿದಿದ್ದು, ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ ವಿಚಾರಿಸಿ ಬಾಲಕನ ಪಾಲನೆಯ ಬಗ್ಗೆ ನಿಲುವನ್ನು ಕೈಗೊಂಡಿದ್ದಾರೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು