ತುಮಕೂರು(03-11- 2020): ಆರ್.ಆರ್.ನಗರ ಉಪಚುನಾವಣೆ ಇಂದು ನಡೆಯುತ್ತಿದೆ ಈ ಮಧ್ಯೆ ಡಿಕೆ ರವಿ ತಾಯಿ ಸೊಸೆ ವಿರುದ್ಧ ಕೋಪವನ್ನು ಬಿಟ್ಟು ನನ್ನ ಸೊಸೆ ಕುಸುಮಾ ಅವರಿಗೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಈ ಕುರಿತ ವಿಡಿಯೋ ವೈರಲ್ ಆಗುತ್ತಿದೆ.
ಸೊಸೆ ವಿರುದ್ಧ ಹೊಟ್ಟೆಯ ಉರಿಯ ಕಾರಣಕ್ಕೆ ಈ ಹಿಂದೆ ಏನೇನೊ ಮಾತನಾಡಿದ್ದೆ. ಆದರೆ ಆಕೆಯ ಕಣ್ಣೀರು ನನಗೆ ನೋಡಲು ಸಾಧ್ಯವಾಗುತ್ತಿಲ್ಲ. ನನ್ನ ಮಗಳಂತೆ ಅವಳ ಜತೆ ನಾಲ್ಕೈದು ವರ್ಷ ಬದುಕಿದ್ದೇನೆ. ದೇವರ ದಯೆಯಿಂದ ಆಕೆ ಗೆಲ್ಲಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಆರ್.ಆರ್.ನಗರ ಕ್ಷೇತ್ರದ ಜನರು ಕುಸುಮಾ ಅವರನ್ನು ಅಕ್ಕ ತಂಗಿಯರ ರೀತಿ, ಅಣ್ಣ ತಮ್ಮಂದಿರಂತೆ ಬೆಂಬಲ ನೀಡಬೇಕು. ಆಕೆ ಗೆದ್ದರೆ ನಿಮ್ಮ ಕೆಲಸ ಮಾಡುತ್ತೇನೆ ಎಂದು ಡಿಕೆ ರವಿ ತಾಯಿ ಹೇಳಿದ್ದಾರೆ.