ಮಹಿಳೆಯನ್ನು ಕೊಂದು ಆಕೆಯ ಹೃದಯವನ್ನು ಆಲೂಗಡ್ಡೆಯ ಜೊತೆಗೆ ಬೇಯಿಸಿ ತಿಂದ ಕಿಲ್ಲರ್

heart
Share on facebook
Share on twitter
Share on linkedin
Share on whatsapp
Share on telegram
Share on email
Share on print

ವಾಷಿಂಗ್ಟನ್ (25-02-2021): ಸೈಕೋ ಕಿಲ್ಲರ್ ಓರ್ವ ಮಹಿಳೆಯೋರ್ವಳನ್ನು ಹತ್ಯೆ ಮಾಡಿದ ಬಳಿಕ ಆಕೆಯ ಹೃದಯವನ್ನು ತನ್ನ ಚಿಕ್ಕಪ್ಪ, ಚಿಕ್ಕಮ್ಮನಿಗೆ ಉಣಬಡಿಸಿ ಬಳಿಕ ಮತ್ತೆ ಎರಡು ಕೊಲೆ ಮಾಡಿದ್ದಾನೆ.

ಈ ಭಯಾನಕ ಘಟನೆ ನಡೆದಿರುವುದು ಅಮೆರಿಕಾದ ಒಕ್ಲಹೋಮದಲ್ಲಿ. ಲಾರೆನ್ಸ್ ಪಾಲ್ ಆ್ಯಂಡರ್ಸನ್  ಈ ಪ್ರಕರಣದ ವಿಲನ್ ಆಗಿದ್ದಾರೆ. ಮಹಿಳೆಯನ್ನು ಕೊಂದ ಬಳಿಕ ಆಕೆಯ ಹೃದಯವನ್ನು ಕತ್ತರಿಸಿದ  ಲಾರೆನ್ಸ್,  ಬಳಿಕ ಹೃದಯವನ್ನು ತನ್ನ ಚಿಕ್ಕಪ್ಪನ ಮನೆಗೆ ತೆಗೆದುಕೊಂಡು ಹೋಗಿ, ಆಲೂಗಡ್ಡೆಯ ಜೊತೆಗೆ ಬೇಯಿಸಿ ಚಿಕ್ಕಪ್ಪ, ಚಿಕ್ಕಮ್ಮನಿಗೆ ಉಣಬಡಿಸಿದ್ದಾನೆ.

ಊಟದ ಬಳಿಕ ತನ್ನ ಚಿಕ್ಕಪ್ಪ ಹಾಗೂ ಅವರ  ನಾಲ್ಕು ವರ್ಷದ ಪುತ್ರಿಯನ್ನು ಹತ್ಯೆ ಮಾಡಿದ್ದು, ಚಿಕ್ಕಮ್ಮನ ಮೇಲೆ ಭೀಕರ ಹಲ್ಲೆ ನಡೆಸಿದ್ದಾನೆ. ಈತ ಸುಮಾರು 20 ವರ್ಷಗಳಿಂದ ಮಾದಕ ದ್ರವ್ಯದಕೇಸ್ ನಲ್ಲಿ ಜೈಲಿನಲ್ಲಿದ್ದ. ವಾರದ ಹಿಂದೆಯಷ್ಟೇ ಈತ ಜೈಲಿನಿಂದ ಬಿಡುಗಡೆಗೊಂಡಿದ್ದ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು