ಮೊಬೈಲ್ ಫೋನ್, ಕರೆನ್ಸಿ ನೋಟುಗಳಲ್ಲಿ ಕೊರೋನ ವೈರಸ್ 28 ದಿನ ಬದುಕಬಲ್ಲುದು! ಏನಿದು ಹೊಸ ಸಂಶೋಧನೆ ಬಿಚ್ಚಿಟ್ಟ ಬೆಚ್ಚಿಬೀಳಿಸುವ ಅಂಶ

covid
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(12-10-2020): ಕೊರೋನಾ ವೈರಸ್‌ ವಸ್ತುಗಳ ಮೇಲ್ಮೈಯಲ್ಲಿ ಎಷ್ಟು ಸಮಯದವರೆಗೆ ಬದುಕುಳಿಯಬಹುದು? ಈ ಪ್ರಶ್ನೆ ಎಲ್ಲರ ಮನಸ್ಸಿನೊಳಗೂ ಮೂಡಿರಬಹುದು. ಹಲವರು ತಮ್ಮದೇ ಆದ ಅಭಿಪ್ರಾಯಗಳನ್ನು ಹೇಳುತ್ತಲೂ ಬಂದಿದ್ದರು. ಇದೀಗ ಆಸ್ಟ್ರೇಲಿಯಾದ ನ್ಯಾಷನಲ್ ಸೈನ್ಸ್ ಏಜೆನ್ಸಿ ಈ ವಿಷಯದಲ್ಲಿ ಆಳವಾದ ಅಧ್ಯಯನ ನಡೆಸಿ, ಫಲಿತಾಂಶವನ್ನು ಜಗತ್ತಿನ ಮುಂದಿಟ್ಟಿದೆ. ಕರೆನ್ಸಿ ನೋಟುಗಳ ಮತ್ತು ಮೊಬೈಲ್ ಫೋನುಗಳ ಮೇಲ್ಮೈಯಲ್ಲಿ ಇಪ್ಪತ್ತೆಂಟು ದಿನಗಳವರೆಗೂ ಈ ವೈರಸ್ ಬದುಕುಳಿಯಲ್ಲುದು ಎಂಬ ಆತಂಕಕಾರಿ ಅಂಶವನ್ನು ಬಹಿರಂಗಪಡಿಸಿದೆ.

ಕೊರೋನಾ ವೈರಸಿನ ಜೀವಿತಾವಧಿಯನ್ನು ಕಂಡು ಹಿಡಿಯಲು ಸಿಎಸ್‌ಐಆರ್‌ಒ ಸಂಶೋಧಕರು ಕಗ್ಗತ್ತಲಿನಲ್ಲಿ, ಮೂರು ರೀತಿಯ ಉಷ್ಣತೆಯಲ್ಲಿ ಅದನ್ನು ಪರೀಕ್ಷಿಸಿದ್ದರು. ಉಷ್ಣತೆಯನ್ನು ಹೆಚ್ಚಿಸಿದಂತೆಲ್ಲಾ ಅದರ ಬದುಕುಳಿಯುವ ಅವಧಿ ಕಡಿಮೆಯಾಗುತ್ತಾ ಬಂದಿರುವುದನ್ನೂ ಅವರು ಕಂಡುಕೊಂಡರು.

ಮೊಬೈಲ್ ಫೋನ್, ಸ್ಕ್ರೀನ್ ಗ್ಲಾಸ್, ಸ್ಟೀಲ್, ಪ್ಲಾಸ್ಟಿಕ್, ಕರೆನ್ಸಿ ನೋಟುಗಳು ಇತ್ಯಾದಿಗಳ ಮೇಲ್ಮೈಯಲ್ಲಿ 20° ಸೆಲ್ಸಿಯಸ್ ನಲ್ಲಿ ಸುಮಾರು ಇಪ್ಪತ್ತೆಂಟು ದಿನಗಳವರೆಗೂ ಬದುಕುಳಿಯಬಹುದು. 30° ಸೆಲ್ಸಿಯಸ್ಸಿನಲ್ಲಿ ವೈರಸ್ ಬದುಕುಳಿಯುವ ಸಾಮರ್ಥ್ಯ ಏಳು ದಿನಗಳಿಗೆ ಇಳಿದರೆ, 40° ಸೆಲ್ಸಿಯಸ್ಸಿನಲ್ಲಿ ಅದು ಇಪ್ಪತ್ತನಾಲ್ಕು ತಾಸುಗಳಿಗೆ ಇಳಿಯುತ್ತದೆ ಎನ್ನುವುದನ್ನೂ ಕಂಡುಕೊಂಡಿದ್ದಾರೆ.

ಈ ಮೊದಲು ನಡೆದ ಅಧ್ಯಯನಗಳಲ್ಲಿ ಇಷ್ಟು ದೀರ್ಘಾಯುಷ್ಯವಿರುವುದನ್ನು ಪ್ರತ್ತೆಹಚ್ಚಿರಲಿಲ್ಲ. ಆಸ್ಟ್ರೇಲಿಯಾ ಸಂಶೋಧಕರ ಪ್ರಕಾರ ಸಾಮಾನ್ಯ ಉಷ್ಣತೆಯಲ್ಲಿ ಕಾಟನ್ ಮೇಲ್ಮೈ ಮೇಲೆ 14 ದಿನಗಳವರೆಗೆ ಬದುಕುವ ಇವು, ಉಷ್ಣತೆ ಜಾಸ್ತಿಯಾದಂತೆ ವೈರಸ್ ನ ಜೀವಿತಾವದಿ ಕಡಿಮೆಯಾಗುತ್ತದೆ.

ಅದೇ ವೇಳೆ ಹೀಗೆ ಬದುಕುಳಿಯುವ ವೈರಸ್ಸುಗಳೆಲ್ಲವೂ ರೋಗ ತರುತ್ತವೆಯೆಂದು ಹೇಳಲಾಗದು. ಆದರೆ ಯಾವುದೇ ವಸ್ತುಗಳನ್ನು ಜಾಗರೂಕತೆಯಿಲ್ಲದೇ ಬೇಕಾಬಿಟ್ಟಿ ಬಳಸಿದರೆ ಮತ್ತು ಇವುಗಳನ್ನು ಸ್ಪರ್ಶಿಸಿದ ಅದೇ ಕೈಯಿಂದ ಕಣ್ಣು, ಮೂಗು, ಬಾಯಿಯನ್ನು ಮುಟ್ಟಿದರೆ, ರೋಗ ಬರುವ ಸಾಧ್ಯತೆಯಿದೆಯೆಂದು ಆಸ್ಟ್ರೇಲಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿಪೇರ್ಡ್ನೆಸ್ ನಿರ್ದೇಶಕ ,ಟ್ರೆವೋರ್ ಡ್ರಿವ್ ಹೇಳಿದರು.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು