ಸುಳ್ಯ (08-10-2020): ಸಂಪಾಜೆಯ ಕಳಗಿ ಬಾಲಚಂದ್ರರ ಕೊಲೆ ಪ್ರಕರಣದ ಆರೋಪಿ ಸಂಪತ್ ಎಂಬಾತನನ್ನು ಶೂಟೌಟ್ ಮಾಡಿ ಕೊಲೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.
ಸುಳ್ಯದ ಶಾಂತಿನಗರದಲ್ಲಿ ಘಟನೆ ನಡೆದಿದ್ದು, ಐದಾರು ಮಂದಿ ತಂಡ ಕಾರನ್ನು ತಡೆದು ನಿಲ್ಲಿಸಿ ಮಿರರ್ ಗೆ ಬಡಿದಿದ್ದಾರೆ. ಅಪಾಯ ತಿಳಿದ ಸಂಪತ್ ಪಕ್ಕದ ಮನೆಗೆ ಓಡಿದ್ದಾನೆ. ಈ ವೇಳೆ ಮುಸುಕು ದಾರಿಗಳು ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಆತ ಪಕ್ಕದ ಮನೆಗೆ ನುಗ್ಗಿದ್ದು, ದುಷ್ಕರ್ಮಿಗಳು ಮನೆಗೆ ನುಗ್ಗಿ ಕೋವಿಯಿಂದ ಆತನ ತಲೆಗೆ ಹೊಡೆದಿದ್ದಾರೆ. ಸ್ಥಳದಲ್ಲೇ ಸಂಪತ್ ಮೃತಪಟ್ಟಿದ್ದಾನೆ.
ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .ಸ್ಥಳಕ್ಕೆ ಸುಳ್ಯ ಪೊಲೀಸರು ತೆರಳಿ ಪರಿಶೀಲನೆಯನ್ನು ನಡೆಸಿದ್ದಾರೆ. ಹತ್ಯೆಗೊಳಗಾದ ಸಂಪತ್ ಇತ್ತೀಚೆಗಷ್ಟೇ ಜಾಮೀನಿನಿಂದ ಬಿಡುಗಡೆಯಾಗಿದ್ದ.