ನವದೆಹಲಿ(07-11-2020): ಬ್ಯಾಂಕ್ ಪಾಸುಬುಕ್ ನಲ್ಲಿ ಡೆತ್ನೋಟ್ ಬರೆದಿಟ್ಟು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನವದೆಹಲಿಯ ಆಜಾದ್ ಕಾಲನಿಯ ಬುದ್ಧ ವಿಹಾರ್ ನಲ್ಲಿ ನಡೆದಿದೆ.
ನೇಣು ಹಾಕಿಕೊಂಡು ಮೃತಪಟ್ಟ ಸುಬೋದ್ ಎಂಬ ಯುವಕನ ಕಿಸೆಯಲ್ಲಿ ತನಿಖೆ ವೇಳೆ ಬ್ಯಾಂಕ್ ಪಾಸ್ಬುಕ್ ಹಾಗೂ ಪೆನ್ ಪತ್ತೆಯಾಗಿದೆ.ಪಾಸ್ಬುಕ್ ಮೇಲೆ ಡೆತ್ನೋಟ್ ಬರೆದಿಟ್ಟು ನೇಣು ಹಾಕಿಕೊಂಡಿದ್ದಾನೆ.
ಡೆತ್ ನೋಟು ನಲ್ಲಿ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ತನ್ನ ಕೊನೆಯ ಆಸೆಯನ್ನು ಆತ ಹೇಳಿಕೊಂಡಿದ್ದು, ಆಸೆ ಈಡೇರಿಸುವಂತೆ ಸೋದರ ಮಾವನಲ್ಲಿ ಹೇಳಿದ್ದಾನೆ.