ಯುವ ಕಾಂಗ್ರೆಸ್ ನಾಯಕಿಗೆ ಚೂರಿ ಇರಿತ.

Share on facebook
Share on twitter
Share on linkedin
Share on whatsapp
Share on telegram
Share on email
Share on print

ಉಡುಪಿ : ಕಾಪು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೀನಾ ಡಿಸೋಜಾ ಅವರಿಗೆ ವ್ಯಕ್ತಿಯೋರ್ವ ಚೂರಿಯಿಂದ ಇರಿದು ಹಲ್ಲೆ ಮಾಡಿದ್ದಾನೆ. ಕಳೆದ ರಾತ್ರಿ ಮನೆ ಪಕ್ಕದಲ್ಲಿ ರೀನಾ ಡಿಸೋಜಾ ಅವರು ತನ್ನ ಗೆಳತಿ ಜೊತೆ ಮಾತನಾಡುತ್ತಿದ್ದಾಗ, ಕುಡಿತದ ಚಟ ಹೊಂದಿದ್ದ ನೆರೆಮನೆಯ ಸುಮಾರು 45 ವರ್ಷದ ವ್ಯಕ್ತಿ ಕ್ಷುಲ್ಲಕ ಕಾರಣಕ್ಕೆ ಜಗಳಕ್ಕಿಳಿದಿದ್ದಾನೆ.

ಮಾತಿನ ಚಕಮಕಿ ನಡೆಯುವ ಸಂದರ್ಭದಲ್ಲಿ ನೇರವಾಗಿ ರೀನಾ ಅವರಿಗೆ ಚಾಕು ಇರಿದಿದ್ದಾನೆ.

ಕೂಡಲೇ ಸ್ಥಳೀಯರು ರೀನಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ರಕ್ತಸ್ರಾವವಾದ ಕಾರಣ ರೀನಾ ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಪ್ರಸ್ತುತ ರೀನಾ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರು ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು, ನಾನು ಕುಡಿತ ಬಿಡುವ ಕೋರ್ಸ್ ಮಾಡುತ್ತಿದ್ದೇನೆ. ಅದಕ್ಕೆ ಈ ವೇಳೆ ಸ್ಥಿಮಿತ ಕಳೆದುಕೊಂಡು ಹೀಗೆ ಮಾಡಿದ್ದೇನೆ ಎಂದು ಪೊಲೀಸರಲ್ಲಿ ಹೇಳಿಕೊಂಡಿದ್ದಾನೆ. ಪಡುಬಿದ್ರೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು