ಮುಖ್ಯ ಶಿಕ್ಷಕಿಯನ್ನು ಶಾಲೆಗೆ ಡ್ರಾಪ್ ಮಾಡಲು ಬಂದ ಪತಿ ಬಾಲಕಿಯನ್ನು ಕೊಂಡೊಯ್ದು ರೇಪ್ ಮಾಡಿದ!

press
Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೊಯಮತ್ತೂರು (23-10-2020): ಮುಖ್ಯ ಶಿಕ್ಷಕಿಯ ಪತಿ ಶಾಲಾ ವಿದ್ಯಾರ್ಥಿನಿಗೆ ಶಾಲೆಯಲ್ಲೇ ರೇಪ್  ಮಾಡಿರುವ ಘಟನೆ ತಡವಾಗಿ ಕೊಯಮತ್ತೂರು ಜಿಲ್ಲೆಯ ಪೊಲಾಚಿಯಿಂದ ವರದಿಯಾಗಿದೆ

10 ವರ್ಷದ ಬಾಲಕಿ ಮತ್ತು ಆಕೆಯ ತಾಯಿ ತಮ್ಮ ಮನೆಯ ಅಂಗಳದಲ್ಲಿ ನಿಂತಿದ್ದಾಗ ವ್ಯಕ್ತಿಯೊಬ್ಬರು ಮನೆಯ ಮುಂದೆ ಹಾದುಹೋದರು. ಆ ವ್ಯಕ್ತಿ ಬಾಲಕಿಯನ್ನು ಕಂಡು ನಿಂತುಕೊಂಡು ತಾಯಿಯಲ್ಲಿ ನಾನು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿಯ ಪತಿ ಎಂದು ಹೇಳಿಕೊಂಡಿದ್ದರು. ಮತ್ತು ಬಾಲಕಿಯನ್ನು ಯಾಕೆ ಸರಕಾರಿ ಶಾಲೆಯಿಂದ ಬಿಡಿಸಿಕೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಬಾಲಕಿ ತಾಯಿ ಮತ್ತು ವ್ಯಕ್ತಿಯ ನಡುವೆ ಸಂಭಾಷಣೆ ನಡೆಯುತ್ತಿದ್ದಾಗ, ಬಾಲಕಿ ನಡುಗುತ್ತಿದ್ದಳು. ಯಾಕೆ ಈ ರೀತಿ ನಡುಗುತ್ತಿದ್ದಿಯಾ ಎಂದು ತಾಯಿ ಬಾಲಕಿಯನ್ನು ಪ್ರಶ್ನಿಸಿದ್ದಾಳೆ. ಆಗ ಬಾಲಕಿ ತನ್ನ ಮೇಲೆ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಆತ ಎಂದು ಹೇಳಿದ್ದಾಳೆ.

PRESS KANNADA

ತಾಯಿ ತಕ್ಷಣ ಬಂದು ನಮ್ಮೊಂದಿಗೆ ದೂರು ದಾಖಲಿಸಿದ್ದಾರೆ ಎಂದು ಕೊಯಮತ್ತೂರು ಜಿಲ್ಲೆಯ ಪೊಲಾಚಿಯಲ್ಲಿರುವ ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನಿರ್ಮಲಾ ಹೇಳಿದ್ದಾರೆ.

ಪೊಲೀಸರು ತಂಗವೇಲ್ ಮತ್ತು ಅವರ ಪತ್ನಿ ಮುಖ್ಯ ಶಿಕ್ಷಕಿ ಅಯಾಮಾ ಅವರನ್ನು ಬುಧವಾರ ಬಂಧಿಸಿದ್ದಾರೆ. ಪತಿಯ ಅಪರಾಧದ ಬಗ್ಗೆ ಪತ್ನಿ ಪೊಲೀಸರಿಗೆ ತಿಳಿಸದಂತೆ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ.

ತಾಯಿಯ ದೂರಿನ ಪ್ರಕಾರ, ಮಾರ್ಚ್‌ನಲ್ಲಿ ಒಂದೆರಡು ಬಾರಿ ಲೈಂಗಿಕ ದೌರ್ಜನ್ಯ ನಡೆದಿದೆ. ಶಾಲೆಯಲ್ಲಿ ಅಯಾಮಾವನ್ನು ಬಿಡಲು ತಂಗವೆಲ್ ಬರುತ್ತಿದ್ದರು. ಕೆಲವು ಶಾಲಾ ಮಕ್ಕಳೊಂದಿಗೆ ಮಾತುಕತೆ ನಡೆಸುತ್ತಿದ್ದರು. ಒಂದು ದಿನ, ಅವರು ಬಾಲಕಿಯನ್ನು ಶಾಲೆಯ ಮುಖ್ಯ ಕಟ್ಟಡದ ಬಳಿ ಸಣ್ಣ ಕಟ್ಟಡಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು