ಕೊಪ್ಪಳ(19-10-2020): ಸಹೋದರನೇ ಅನ್ಯಜಾತಿಯ ವಿಹಾವವಾದ ಸಹೋದರಿಯನ್ನು ರಾಡ್ನಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಕಾರಟಗಿ ನಗರದಲ್ಲಿ ನಡೆದಿದೆ.
ಪ್ರಕರಣ ಮರ್ಯಾದಾ ಹತ್ಯೆ ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ 31 ವರ್ಷದ ವಿನೋದ್ ತನಗಿಂತ ವಯಸ್ಸಿನಲ್ಲಿ ದೊಡ್ಡವಳಾದ 34 ವರ್ಷದ ತ್ರಿವೇಣಿಯನ್ನು 7 ತಿಂಗಳ ಹಿಂದೆ ಮದುವೆಯಾಗಿದ್ದ. ಇದೊಂದು ಅಂತರ್ ಜಾತಿ ವಿವಾಹ ಎಂಬ ಕಾರಣಕ್ಕೆ ತ್ರಿವೇಣಿಯ ಸಹೋದರ ವಿವಾಹಕ್ಕೆ ವಿರೋಧಿಸಿದ್ದ. ಇದೀಗ ಸಹೋದರನೇ ಹತ್ಯೆ ಮಾಡಿದ್ದಾನೆ ಎನ್ನುವುದು ತನಿಖೆಯಲ್ಲಿ ತಿಳಿದು ಬಂದಿದೆ.
ಕೊಪ್ಪಳ ಎಸ್ಪಿ ಟಿ.ಶ್ರೀಧರ ನೇತೃತ್ವದ ಪೊಲೀಸ್ ತಂಡ ಕೃತ್ಯ ನಡೆದ ಕೆಲವೇ ಗಂಟೆಯಲ್ಲಿ ಪ್ರಕರಣದ ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.