ತಿರುವನಂತಪುರ(16-10-2020): ಹಸುಗಳನ್ನು ಕದ್ದು ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ.
ಎರ್ನಾಕುಲಂ ಮೂಲದವನಾದ ಮುರಳೀಧರನ್ ಕುನ್ನಮಂಗಕಂ ಎಂಬಲ್ಲಿಗೆ ಪ್ರತಿರಾತ್ರಿ ಬಂದು ಅಲ್ಲಿರುವ ಕೊಟ್ಟಿಗೆಗಳಿಂದ ಹಸುಗಳನ್ನು ಕದ್ದುಕೊಂಡು ಹೋಗಿ ಕಾಮತೀಟೆ ತೀರಿಸಿಕೊಂಡು ನಂತರ ಹಸುಗಳನ್ನು ಬಿಟ್ಟು ಪರಾರಿಯಾಗುತ್ತಿದ್ದ.
ಈತ ಕೃತ್ಯಕ್ಕೆ ಕೆಲವು ಹಸುವುಗಳು ಬಿದ್ದುಕೊಂಡಿದ್ದರೆ, ಕೆಲವು ಹಸುಗಳು ಮನೆಗೆ ಮರಳುತ್ತಿದ್ದವು ಮತ್ತು ವಿಚಿತ್ರವಾಗಿ ಒದ್ದಾಡುತ್ತಿದ್ದವು. ಈ ಕುರಿತು ಹಸುವಿನ ಮಾಲಕರು ಪೊಲೀಸರ ಗಮನಕ್ಕೆ ತಂದಿದ್ದರು. ಬಳಿಕ ಸಿಸಿಟಿವಿಯನ್ನು ಪೊಲೀಸರು ಪರಿಶೀಲಿಸಿದಾಗ ಮುರಳೀಧರನ್ ಎಂಬಾತನ ಕೃತ್ಯ ಬಹಿರಂಗವಾಗಿದೆ.ಆರೋಪಿಯನ್ನು ಈಗಾಗಲೇ ಎರ್ನಾಕುಲಂ ಪೊಲೀಸರು ಬಂಧಿಸಿದ್ದಾರೆ.