ದೆಹಲಿ(28-10-2020): ಅಭಿಮಾನಿಯ ಪ್ರೀತಿಯನ್ನು ಕಂಡು ಎಂ.ಎಸ್ ಧೋನಿ ಭಾವುಕರಾಗಿದ್ದಾರೆ. ಈ ಕುರಿತ ವಿಡಿಯೋ ಸಿಎಸ್ ಕೆ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ತಮಿಳುನಾಡಿನ ಗೋಪಿಕೃಷ್ಣನ್ ಎಂಬವರು ತಮ್ಮ ಮನೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಂಕೇತವಾದ ಹಳದಿ ಬಣ್ಣ ಹಾಗೂ ಮನೆಯ ತುಂಬೆಲ್ಲ ಧೋನಿಯ ಚಿತ್ರ ಬಿಡಿಸಿದ್ದರು. ಇದು ಧೋನಿ ಭಾವುಕರಾಗಲು ಕಾರಣವಾಗಿದೆ.
ಇನ್ಸ್ಟಾಗ್ರಾಂನಲ್ಲಿ ನಾನು ಈ ವಿಡಿಯೋ ನೋಡಿದೆ. ಇದು ಕೇವಲ ನನ್ನ ಮೇಲಿರುವ ಪ್ರೀತಿ ಮಾತ್ರವಲ್ಲ. ಸಿಎಸ್ಕೆ ತಂಡದ ಮೇಲಿನ ಅಭಿಮಾನ ಎಂದು ಧೋನಿ ಹೇಳಿದ್ದಾರೆ.ನಾನು ಇದಕ್ಕೆ ವಂದನೆಯನ್ನು ಅಭಿಮಾನಿ ಕುಟುಂಬಕ್ಕೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.