ಮುಂಬೈ(22-12-2020): ಅನುಮತಿ ಮೀರಿ ಪಾರ್ಟಿ ಮಾಡುತ್ತಿದ್ದ ಮುಂಬೈ ಡ್ರಾಗನ್ ಫ್ಲೈ ಕ್ಲಬ್ ಮೇಲೆ ದಾಳಿ ನಡೆಸಿದ ಪೊಲೀಸರು ನಿವೃತ್ತ ಕ್ರಿಕೆಟಿಗ ಸುರೇಶ್ ರೈನಾ, ಗಾಯಕ ಗುರು ರಾಂಧವಾ ಮತ್ತು ಸುಸ್ಸೇನ್ ಸೇರಿದಂತೆ 34 ಮಂದಿ ವಿರುದ್ಧ ಕೇಸ್ ದಾಖಲಿಸಿ ಬಂಧಿಸಿದ್ದಾರೆ.
ಇವರ ಮೇಲೆ ಅನುಮತಿ ಮೀರಿ ಪಾರ್ಟಿ ಮತ್ತು ಕೋವಿಡ್ ನಿಯಮಗಳ ಉಲ್ಲಂಘನೆಯ ಆರೋಪವಿದೆ. ಇದರಿಂದಾಗಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 188, 269, 34ರ ಅಡಿ, ಬಾಂಬೆ ಪೊಲೀಸ್ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗ ಕಾಯ್ದೆಗಳ ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ನಿವೃತ್ತ ಕ್ರಿಕೆಟಿಗ ಸುರೇಶ್ ರೈನಾ, ಗಾಯಕ ಗುರು ರಾಂಧವಾ ಮತ್ತು ಸೆಲಬ್ರಟಿ ಸುಸ್ಸೇನ್ ಇವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ.