ಮುಸ್ಲಿಮರ ಮೃತದೇಹ ದಫನ ಮಾಡಲು ಭೂಮಿ ನೀಡಬಾರದು ; ಸಾಕ್ಷಿ ಮಹಾರಾಜ್ ರಿಂದ ವಿವಾದಾತ್ಮಕ ಹೇಳಿಕೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಉನ್ನಾವೋ(26/10/2020): ವಿವಾದಾತ್ಮಕ ಹಾಗೂ ಕೋಮುವಾದಿ ಹೇಳಿಕೆಗಳಿಗೆ ಪ್ರಸಿದ್ಧರಾಗಿರುವ ಸಂಸದ ಸಾಕ್ಷಿ ಮಹಾರಾಜ್ ಮತ್ತೊಂದು ವಿವಾದಾತ್ಮಕ  ಹೇಳಿಕೆ ನೀಡಿದ ಆಕ್ಷೇಪಕ್ಕೆ ಗುರಿಯಾಗಿದ್ದಾರೆ.  ಮುಸ್ಲಿಮರು ಮೃತಪಟ್ಟರೆ ಸಮಾಧಿ ಮಾಡಲು ಭೂಮಿ ನೀಡಬಾರದು. ಅದರ ಬದಲು ಻ವರುಅ ದಹನ ಮಾಡಬೇಕೆಂದು ಎಂದು ಅವರು ಹೇಳಿದ್ದಾರೆ.

ಬಾಂಗಾರ್ ಮಾವ್ ವಿಧಾನಸಭೆ ಉಪಚುನಾವಣಾ ಪ್ರಚಾರದ ಸಂಧರ್ಭದಲ್ಲಿ ಭಾನುವಾರ ನಡೆದ ‘ನುಕಾಡ್ ಸಬಾ’ ದಲ್ಲಿ ಮಾತಾನಾಡುತ್ತಾ ಅವರು ಈ ಹೇಳಿಕೆ ನೀಡಿದ್ದು, ಇಡೀ ಭಾರತದಲ್ಲಿ ಒಟ್ಟು 20ಕೋಟಿಯಷ್ಟು ಮುಸ್ಲಿಮರು ಇದ್ದಾರೆ. ಇವರೆಲ್ಲರನ್ನೂ ಸಮಾಧಿ ಮಾಡಿದರೆ ಎಷ್ಟೊಂದು ಭೂಮಿ ಬೇಕಾದೀತು ಎಂದು ಸಾಕ್ಷಿ ಮಹಾರಾಜ್ ಕೇಳಿದ್ದಾರೆ.
ಒಂದು ಗ್ರಾಮದಲ್ಲಿ ಲಭ್ಯವಿರುವ ಸ್ಮಶಾನಗಳು ಮತ್ತು ಖಬರಸ್ಥಾನಗಳ ಗಾತ್ರವು ಅಲ್ಲಿ ವಾಸಿಸುವ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿರಬೇಕು. ಮುಸ್ಲಿಮರು ಗ್ರಾಮಗಳಲ್ಲಿ ದೊಡ್ಡ ಸ್ಮಶಾನಗಳನ್ನು ಹೊಂದಿರುವುದರಿಂದ ಹಿಂದೂಗಳಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು