ಕೇರಳ(05-10-2020): ಕೇರಳದ ತ್ರಿಶೂರ್ ನಗರದಲ್ಲಿ ಭಾನುವಾರ ರಾತ್ರಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಶಾಖಾ ಕಾರ್ಯದರ್ಶಿಯನ್ನು ಇರಿದು ಕೊಲೆ ಮಾಡಲಾಗಿದೆ.
ಎರಡು ಗುಂಪುಗಳ ಸದಸ್ಯರ ನಡುವಿನ ಘರ್ಷಣೆಯಲ್ಲಿ ಪಿಯು ಸನೂಪ್ (26) ಮೃತಪಟ್ಟಿದ್ದಾರೆ. ಘರ್ಷಣೆಯಲ್ಲಿ ಪಕ್ಷದ ಇತರ ಮೂವರು ಕಾರ್ಯಕರ್ತರು ಸಹ ಗಾಯಗೊಂಡಿದ್ದಾರೆ.
ಬಲಪಂಥೀಯ ಪಕ್ಷಗಳಿಗೆ ಸಂಬಂಧಿಸಿದ ದುಷ್ಕರ್ಮಿಗಳು ಕೃತ್ಯ ನಡೆಸಿರುವ ಬಗ್ಗೆ ಆರೋಪಿಸಲಾಗಿದೆ. ಪೊಲೀಸರ ಪ್ರಕಾರ, “ಅಕ್ರಮ” ಬೈಕ್ ರೇಸ್ ಕುರಿತಂತೆ ಎರಡು ಗುಂಪುಗಳ ನಡುವೆ ಗಲಾಟೆ ನಡೆಯಿತು. ಗಲಾಟೆ ಹಿಂಸಾಚಾರಕ್ಕೆ ಕಾರಣವಾಯಿತು, ಮತ್ತು ಓರ್ವನ ಕೊಲೆಗೆ ಸಾಕ್ಷಿಯಾಗಿದೆ.
ಈಗಾಗಲೇ ಅಪರಾಧದಲ್ಲಿ ಭಾಗಿಯಾಗಿರರುವ ಆರು ಜನರು ಪರಾರಿಯಾಗಿದ್ದಾರೆ. ಸಿಪಿಐ (ಎಂ) ಕಾರ್ಯಕರ್ತನ ಹತ್ಯೆಯ ಹಿಂದೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಕೈವಾಡವಿದೆ ಎಂದು ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್ಐ) ರಾಜ್ಯ ಕಾರ್ಯದರ್ಶಿ ಎ.ಎ. ರಹೀಮ್ ಆರೋಪಿಸಿದ್ದಾರೆ.