ಒಂದು ಅವಮಾನ ಇಡೀ ಸರಕಾರದ ಪತನಕ್ಕೆ ಕಾರಣವಾಯಿತು! ಸಮ್ಮಿಶ್ರ ಸರಕಾರ ಪತನದ ಹಿಂದಿನ ಸ್ಟೋರಿ….

cp yageeshwar
Share on facebook
Share on twitter
Share on linkedin
Share on whatsapp
Share on telegram
Share on email
Share on print

ರಾಮನಗರ(11-12-2020):ಸಮ್ಮಿಶ್ರ ಸರಕಾರ ಪತನದ ಕುರಿತು ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.

ವೈರಲ್ ಆಡಿಯಾದಲ್ಲಿ ಡಿಕೆ ಶಿವಕುಮಾರ್ ಮತ್ತು ಹೆಚ್ ಡಿ ಕುಮಾರಸ್ವಾಮಿ ಬಗ್ಗೆ ಯೋಗೇಶ್ವರ್‌ ಮಾತನಾಡುವುದು ಕೇಳಿಸುತ್ತದೆ. ಸಮ್ಮಿಶ್ರ ಸರಕಾರದ ಪತನ ಮತ್ತು ಅದನ್ನು ಪಟ್ಟು ಬಿಡದೆ ಯಾಕೆ ಮಾಡಿದ್ದೇನೆ ಎನ್ನುವುದನ್ನು ಯೋಗಿಶ್ವರ್ ಆಡಿಯೋದಲ್ಲಿ ಹೇಳಿದ್ದಾರೆ. ಇದು ಸಿಪಿ ಯೋಗೀಶ್ವರ್ ಚೆನ್ನಪಟ್ಟಣದಲ್ಲಿ ಮಾತನಾಡಿರುವ ಆಡಿಯೋ ಎನ್ನಲಾಗಿದೆ.

ನಾನೇ ಸ್ಕೆಚ್‌ ಹಾಕಿ ಕುಮಾರಸ್ವಾಮಿ ಸರ್ಕಾರವನ್ನು ಕೆಡವಿದ್ದು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ-ಶಿವಕುಮಾರ್‌ ಇಬ್ಬರೂ ಸೇರಿ ಚನ್ನಪಟ್ಟಣದಲ್ಲಿ ನನ್ನನ್ನು ಸೋಲಿಸಿದರು. ಇದರಿಂದ ಮತದಾರರಿಗೆ ಮುಖ ತೋರಿಸಲು ಬೇಸರವಾಗಿ ನಾನು ಬೆಂಗಳೂರು ಸೇರಿದೆ. ಬಳಿಕ ಬರೀ ಚನ್ನಪಟ್ಟಣದಲ್ಲಿ ರಾಜಕೀಯ ಮಾಡಿಕೊಂಡು ಇದ್ದರೆ ಸಾಲದು ಎಂದು ಬೆಂಗಳೂರಿನಲ್ಲೇ ಕುಳಿತು ಸ್ಕೆಚ್‌ ಹಾಕಿ ಅವನನ್ನು ಅಧಿಕಾರದಿಂದ ಇಳಿಸಿದೆ ಎಂದು ಹೇಳಿದ್ದಾರೆ.

ಶಿವಕುಮಾರನ ತಮ್ಮ ಸುರೇಶ ನನ್ನನ್ನು ಯಾರು ಅಂತ ಅಂತಿದ್ದ. ಅದಾದ ಬಳಿಕ ಸಮ್ಮಿಶ್ರ ಸರ್ಕಾರ ಉರುಳುತ್ತಲೇ ಶಿವಕುಮಾರ ತಿಹಾರ್‌ ಜೈಲಿಗೆ ಹೋದ ಎಂದು ಹೇಳಿದ್ದಾರೆ. ಕಳೆದ ಚುನಾವಣೆಯಲ್ಲಿ ನಾನೇನಾದರೂ ಗೆದ್ದಿದ್ದರೆ ಇಷ್ಟೊತ್ತಿಗೆ ಒಬ್ಬ ಉಪಮುಖ್ಯಮಂತ್ರಿಯೋ, ಪ್ರಭಾವಿ ಮಂತ್ರಿಯೋ ಆಗಿರುತ್ತಿದ್ದೆ. ಈಗಲೂ ಬಿಜೆಪಿ ನನ್ನ ಕೈಬಿಟ್ಟಿಲ್ಲ.ನನ್ನನ್ನು ಮಂತ್ರಿ ಮಾಡುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

 

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು