ಕೋವಿಡ್ ನಂತಿರುವ ರೋಗ ಜಾನುವಾರಗಳಲ್ಲಿ ಪತ್ತೆ! ಗೋವುಗಳಿಗೂ ಐಸೋಲೇಶನ್!

cow
Share on facebook
Share on twitter
Share on linkedin
Share on whatsapp
Share on telegram
Share on email
Share on print

ಶಿವಮೊಗ್ಗ (24-10-2020): ಕೋವಿಡ್ ಗೆ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಆಘಾತವುಂಟಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ಜಾನುವಾರಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಇದು ಕೂಡ ಸಾಂಕ್ರಾಮಿಕ ರೋಗವಾಗಿದ್ದು, ನೇರ ಸಂಪರ್ಕದಿಂದ ಹರಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಮಲೆನಾಡಿನ 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪಾಕ್ಸ್ ವಿರಿಡೆ ಎಂಬ ವೈರಸ್​ನಿಂದ ಹರಡುವ ಚರ್ಮಗಂಟು ರೋಗ ಪತ್ತೆಯಾಗಿದೆ. ಈ ರೋಗ ಈ ಮೊದಲು ಕೇರಳ ಹಾಗೂ ಒರಿಶಾದಲ್ಲೂ ಕಂಡುಬಂದಿತ್ತು

ರೋಗವುಳ್ಳ ಜಾನುವಾರುಗಳ ನೇರ ಸಂಪರ್ಕ, ಮೇವು, ನೀರಿನಿಂದಲೂ ಚರ್ಮಗಂಟು ರೋಗ ಹರಡುತ್ತದೆ. ಶೇ.‌20 ಜಾನುವಾರುಗಳಿಗೆ ರೋಗ ಹರಡುವ ಸಾಧ್ಯತೆಗಳಿದ್ದು, ಶೇ.1 ರಿಂದ 5 ರಷ್ಟು ಜಾನುವಾರುಗಳು ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ಪಶುಸಂಗೋಪನಾ ಇಲಾಖೆ ತಿಳಿಸಿದೆ.

ಚರ್ಮಗಂಟು ರೋಗ ಸೋಂಕಿತ ಜಾನುವಾರುಗಳಿಗೂ ಐಸೋಲೇಶನ್ ಮಾಡಲಾಗುತ್ತಿದೆ. ರೋಗ ಪತ್ತೆಯಾದ ಜಾಗದಲ್ಲಿ ಜಾತ್ರೆ, ಪಶು ಸಾಗಾಣಿಕೆ, ಪಶುಮೇಳ ನಿಷೇಧಿಸಲು ಇಲಾಖೆ ಸೂಚನೆ ನೀಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು