ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ 3 ಲಕ್ಷ ಪರಿಹಾರ, ಮಾಸಿಕ 2 ಸಾವಿರ : ಕೇರಳ ಸಿಎಂ ಪಿಣರಾಯಿ ವಿಜಯನ್ ಘೋಷಣೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ತಿರುವನಂಪುರ: ಕೊರೊನಾ ಎರಡನೇ ಅಲೆ ದೇಶದ ಜನತೆಗೆ ತುಂಬಾ ಸಂಕಷ್ಟಕ್ಕೆ ದೂಡಿದೆ. ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ವ್ಯಾಪಕವಾಗಿ ಹರಡಿರುವ ಕೊರೊನಾ ವೈರಸ್ ಕೆಲವು ಕುಟುಂಬಗಳಿಗೆ ಇನ್ನಿಲ್ಲದಂತೆ ಕಾಡುತ್ತಿದೆ.

ಇದಕ್ಕೆ ಕೇರಳ ರಾಜ್ಯವು ಹೊರತಾಗಿಲ್ಲ, ಕೇರಳದಲ್ಲಿಯೂ ಕೋವಿಡ್ ಆರ್ಭಟ ಜೋರಾಗಿದೆ. ಅನೇಕರು ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡು ನೋವಿನ ಮಡುವಿನಲ್ಲಿ ಮುಳುಗಿದರೆ, ಇನ್ನೂ ಕೆಲವೊಂದು ಕಡೆಯಲ್ಲಿ ಪೋಷಕರನ್ನು ಕಳೆದುಕೊಂಡು ಮಕ್ಕಳು ಅನಾಥರಾಗಿರುವ ಧಾರುಣ ಘಟನೆಗಳು ನಡೆದಿವೆ.

ಇಂಥ ಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರಗಳು ನೊಂದವರ ಪರವಾಗಿ ದನಿಯಾಗಿ ಆತ್ಮಸ್ಥೈರ್ಯ ತುಂಬುವ ಜೊತೆಗೆ ಆರ್ಥಿಕ ನೆರವು ಒದಗಿಸುವ ಕೆಲಸಗಳು ಮಾಡುತ್ತಿವೆ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಕುಟುಂಬಗಳಿಗೆ ಸರ್ಕಾರಗಳು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿವೆ. ದೆಹಲಿ, ಹರಿಯಾಣ, ಕೇರಳ,ಕರ್ನಾಟಕ ಹಾಗೂ ಆಂಧ್ರಪ್ರದೇಶ ರಾಜ್ಯದಲ್ಲಿ ಈಗಾಗಲೇ ಘೋಷಣೆ ಆಗಿದೆ.

ಕೋವಿಡ್ ದಿಂದ ಮೃತಪಟ್ಟವರಿಗೆ 50 ಸಾವಿರ, ಹಾಗೂ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಪಾಲನೆ ಮಾಡುವ ಬಗ್ಗೆ ಘೋಷಿಸಿದ ದೆಹಲಿ ಸರ್ಕಾರ ಇಡೀ ದೇಶಕ್ಕೆ ಮಾದರಿಯಾಗಿದೆ. ಈದೀಗ ಕೇರಳ ಸರ್ಕಾರವು ಈ ನಿಟ್ಟಿನಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.

ಕೋವಿಡ್ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ಕೇರಳ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ತಂದೆ-ತಾಯಿಯನ್ನು ಕಳೆದುಕೊಂಡಿರುವ ಅನಾಥ ಮಕ್ಕಳಿಗೆ 3 ಲಕ್ಷ ರೂಪಾಯಿಗಳನ್ನು ತಕ್ಷಣದ ಪರಿಹಾರವಾಗಿ ನೀಡಲಾಗುವುದು ಮತ್ತು ಅವರ 18 ನೇ ಹುಟ್ಟುಹಬ್ಬದವರೆಗೆ ಮಾಸಿಕ ₹ 2,000 ನೀಡಲಾಗುತ್ತದೆ. ಹಾಗೇ ಮಕ್ಕಳ ಪದವಿ ಮುಗಿಯುವವರೆಗೂ ಗೋಕ್ ಶೈಕ್ಷಣಿಕ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ಘೋಷಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು