ಕೋವಿಡ್ ನಿರ್ವಹಣೆ ವೆಚ್ಚದ ಲೆಕ್ಕ ಕೊಡಿ: ರೋಹಿಣಿ ಸಿಂಧೂರಿ ವಿರುದ್ಧ ಸಂಸದ ಪ್ರತಾಪ್ ಸಿಂಹ ಗರಂ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮೈಸೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು – ಕೊಡಗು ಸಂಸದ ಪ್ರತಾಪ್ ಸಿಂಹ ನಡುವಿನ ಜಟಾಪಟಿ ಮತ್ತೆ ಮುಂದುವರಿದಿದೆ. ರೋಹಿಣಿ ಸಿಂಧೂರಿ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರದ ₹  28 ಲಕ್ಷ ವೆಚ್ಚದಲ್ಲಿ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿಕೊಳ್ಳುವ ಅಧಿಕಾರಿಗಳಿಂದ ಜನಪ್ರತಿನಿಧಿಗಳು ಪಾಠ ಕಲಿಯುವ ಅಗತ್ಯವಿಲ್ಲ. ಸರ್ಕಾರ ಕೋವಿಡ್ ನಿರ್ವಹಣೆಗೆ ಮೈಸೂರು ಜಿಲ್ಲೆಗೆ ₹  41 ಕೋಟಿ ಹಣ ಕೊಟ್ಟಿದೆ. ಇದುವರೆಗೂ ರೂ.39 ಕೋಟಿ ಖರ್ಚಾಗಿದೆ ಎಂದು ತಿಳಿಸಿದ್ದಾರೆ. ಸಾರ್ವಜನಿಕರಿಗೆ ಮೊದಲು ಇದರ ಲೆಕ್ಕ ಕೊಡಿ ಎಂದು ಸಂಸದ ಪ್ರತಾಪ್​ ಸಿಂಹ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಔಷಧಿ ಖರೀದಿಸಲು ಟೆಂಡರ್ ಅದು ಇದು ಅಂತೀರಾ. ಈಜುಕೊಳ ಕಟ್ಟಿಸಲು ಟೆಂಡರ್ ಕಾಯ್ದೆ ನೋಡಿದ್ರಾ? ಪಾರಂಪರಿಕ ನಿಯಮ ಪಾಲಿಸಿದ್ದೀರಾ? ಮೈಸೂರು ಮಹಾನಗರ ಪಾಲಿಕೆಯಿಂದ ಪರ್ಮಿಷನ್ ಪಡೆದಿದ್ದೀರಾ? ಇದಾವುದಕ್ಕೂ ನಿಯಮ ಪಾಲಿಸಿಲ್ಲವೆಂದ ಮೇಲೆ ಔಷಧಿ ಖರೀದಿಗೆ ಟೆಂಡರ್ ಕಾಯ್ದೆ ಬೇಕಾ? ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

ಕೋವಿಡ್ ಸಂಕಷ್ಟಕ್ಕೆ ಸ್ಪಂದಿಸಲೆಂದೇ ಪ್ರಧಾನಿಯವರು ದೇಶಾದ್ಯಂತ 1 ಲಕ್ಷ ವೆಂಟಿಲೇಟರ್ ಕೊಟ್ಟಿದ್ದಾರೆ.
ಪಿಎಂ ಕೇರ್ ನಿಂದ ಮೈಸೂರಿಗೆ ಬಂದ 40 ವೆಂಟಿಲೇಟರ್‍ಗಳನ್ನ ಅಳವಡಿಕೆ ಮಾಡಿಲ್ಲ. ರಾಜ್ಯದ ಬೊಕ್ಕಸ ಬರಿದಾಗಿರುವ ಸಂದರ್ಭದಲ್ಲಿ. ಸರ್ಕಾರಿ ದುಡ್ಡಲ್ಲಿ ಮೋಜು ಮಸ್ತಿಗಾಗಿ ಸ್ವಿಮ್ಮಿಂಗ್ ಪೂಲ್ ಅವಶ್ಯಕತೆ ಇತ್ತಾ ಎಂದು ಪ್ರತಾಪ್ ಸಿಂಹ ಗುಡುಗಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು