ಕೊರೊನಾ ಬಂದ್ರೆ ಮಮತಾ ಬ್ಯಾನರ್ಜಿಯನ್ನು ತಬ್ಬಿಕೊಳ್ಳುತ್ತೇನೆ ಎಂದಿದ್ದ ಬಿಜೆಪಿ ಮುಖಂಡನಿಗೆ ಕೋವಿಡ್ ಪಾಸಿಟಿವ್

aupam
Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೋಲ್ಕತ್ತಾ(03-10-2020): ನನಗೆ ಕೊರೊನಾ ಬಂದರೆ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ತಬ್ಬಿಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಅನುಪಮ್ ಹಜ್ರಾಗೆ ಕೋವಿಡ್ ದೃಢಪಟ್ಟಿದೆ.

 ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್ ಹಜ್ರಾ, ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ನನಗೆ ಕೊರೊನಾ ಬಂದರೆ ನಾನು ಮಮತಾ ಬ್ಯಾನರ್ಜಿಯನ್ನು ಮೊದಲು ತಬ್ಬಿಕೊಳ್ಳುತ್ತೇನೆಂದು ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು. ಸಿಲಿಗುರಿಯಲ್ಲಿ ಈ ಕುರಿತು ಟಿಎಂಸಿ ನಾಯಕರು ಪ್ರಕರಣ ಕೂಡ ದಾಖಲಿಸಿದ್ದರು.

ಇದೀಗ ಅನುಪಮ್ ಹಜ್ರಾ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಕೋಲ್ಕತಾದ ಖಾಸಗಿ ಆಸ್ಪತ್ಪೆಗೆ ದಾಖಲಾಗಿದ್ದಾರೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು