ಬೆಚ್ಚಿಬೀಳಿಸುವ ಸುದ್ದಿ| ಭಾರತದಲ್ಲಿ ಹೊಸ ಸ್ವರೂಪದ ಕೋವಿಡ್ ವ್ಯಾಪಕವಾಗಿ ಹರಡಿರುವ ಆತಂಕ

covid
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(22-12-2020): ಬೆಚ್ಚಿಬೀಳಿಸುವ ಸುದ್ದಿಯೊಂದು ಇದೀಗ ಬಹಿರಂಗವಾಗಿದ್ದು, ಹೊಸ ಸ್ವರೂಪದ ಕೊರೊನಾ ವೈರಸ್ ಭಾರತದಲ್ಲಿ ಈಗಾಗಲೇ ಹಲವರಿಗೆ ತಗುಲಿದೆ. ಆದರೆ ವಿಜ್ಞಾನಿಗಳು ಮತ್ತು ವೈದ್ಯರು ಈ ವೈರಸ್ ನ್ನು ಪತ್ತೆಹಚ್ಚುವಲ್ಲಿ ವಿಫಲರಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಎನ್5017 ಎಂದು ಗುರುತಿಸಲಾಗಿರುವ ಹೊಸ ಸ್ವರೂಪದ ಕೊರೊನಾ ಸೋಂಕು ಇಂಗ್ಲೆಡ್‍ನಲ್ಲಿ ಸೆಪ್ಟಂಬರ್ ನಲ್ಲೇ ಕಾಣಿಸಿಕೊಂಡಿದೆ. ಆ ಬಳಿಕ ಭಾರತಕ್ಕೆ ವಿಮಾನ ಸೇವೆ ಇದ್ದ ಕಾರಣ ಹಲವಾರು ಪ್ರಯಾಣಿಕರು ಹೋಗಿ ಬಂದಿದ್ದಾರೆ. ಸರಿಯಾಗಿ ಕೋವಿಡ್ ಪರೀಕ್ಷೆ ಕೂಡ ನಡೆದಿಲ್ಲ. ಇದರಿಂದಾಗಿ ರೂಪಾಂತರಿತ ಕೊರೊನಾವನ್ನು ಪತ್ತೆಹಚ್ಚುವಲ್ಲಿ ವೈಫಲ್ಯತೆ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ.

ಕೊರೊನಾ ತೀವ್ರವಾದ ಹಿನ್ನೆಲೆಯಲ್ಲಿ ಇಂಗ್ಲೆಂಡ್‍ನ ಕೆಲವು ಭಾಗಗಳಲ್ಲಿ ಈಗಾಗಲೇ ಲಾಕ್‍ಡೌನ್ ಮಾಡಲಾಗಿದೆ. ಅನಂತರ ಜಗತ್ತಿನ ಬೇರೆ ಬೇರೆ ದೇಶಗಳು ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ರದ್ದುಗೊಳಿಸಿದೆ.

ಇಂತದ್ದೇ ಸ್ವರೂಪದ ಕೊರೊನಾ ಮಲೇಷ್ಯಾದಲ್ಲಿ ಪತ್ತೆಯಾಗಿದೆ, ಎನ್5017ಗೂ ಕೋವಿಡ್-19ನಷ್ಟೇ ಅಪಾಯಕಾರಿ. ಅದಕ್ಕೂ ಮೀರಿ ಹೆಚ್ಚಿನ ಆಘಾತ ಉಂಟು ಮಾಡುವ ಗುಣ ಲಕ್ಷಣಗಳು ಕಂಡು ಬಂದಿಲ್ಲ ಎಂದು ತಜ್ಞರು ಹೇಳುತ್ತಾರೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು