COVID-19 ಲಸಿಕೆ ಪ್ರಯೋಗದ ನಂತರ ತೀವ್ರ ಅಡ್ಡಪರಿಣಾಮ| 5 ಕೋಟಿ ಪರಿಹಾರ ಕೇಳಿದ ವ್ಯಕ್ತಿ

covid vachine
Share on facebook
Share on twitter
Share on linkedin
Share on whatsapp
Share on telegram
Share on email
Share on print

ಪುಣೆ (29-11-2020): ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ನಡೆಸಿದ ಕೋವಿಡ್ -19 ಲಸಿಕೆ ಪ್ರಯೋಗದ ಮೂರನೇ ಹಂತದ ಸ್ವಯಂಸೇವಕರಾಗಿದ್ದ 40 ವರ್ಷದ ಚೆನ್ನೈ ಮೂಲದ ವ್ಯಕ್ತಿ ಗಂಭೀರ ನರವೈಜ್ಞಾನಿಕ ಮತ್ತು ಮಾನಸಿಕ ರೋಗಲಕ್ಷಣಗಳಿಂದ ಬಳಲುತ್ತಿದ್ದು, ಪರಿಹಾರವಾಗಿ 5 ಕೋಟಿ ರೂ. ಕೊಡುವಂತೆ ಆಗ್ರಹಿಸಿದ್ದಾರೆ.

ಚೆನ್ನೈನ ಶ್ರೀ ರಾಮಚಂದ್ರ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಶ್ರೀಹರ್) ಅವರಿಗೆ ಔಷಧಿ ನೀಡಲಾಯಿತು.

ಪ್ರತಿಕೂಲ ಘಟನೆಯ ಸಂಭವಿಸಿರುವ ಬಗ್ಗೆ  ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ ಸಮಿತಿಯು ತನಿಖೆ ನಡೆಸುತ್ತಿದೆ.

ವ್ಯಕ್ತಿಯು ಪರಿಹಾರವನ್ನು ಕೋರಿದ್ದು, ಲಸಿಕೆಯ ಪರೀಕ್ಷೆ, ಉತ್ಪಾದನೆ ಮತ್ತು ವಿತರಣೆಯನ್ನು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು