ಕೋವಿಡ್ ಲಸಿಕೆ ಪಡೆಯುವವರಿಗೆ ಉಚಿತ ಗಾಂಜಾ ವಿತರಣೆ!! ಹೌದು ಈ ದೇಶದಲ್ಲಿ ಹೀಗೂ ಉಂಟು…

Share on facebook
Share on twitter
Share on linkedin
Share on whatsapp
Share on telegram
Share on email
Share on print

ವಾಷಿಂಗ್ಟನ್: ಗಾಂಜಾ ಸೇವನೆ, ಸಾಗಾಣಿಕೆ ತಡೆಯಲು ವಿಶ್ವಾದ್ಯಂತವಿರುವ ಸರಕಾರಗಳು ಪಾಡು ಪಡುತ್ತಿರುವಾಗ ಕೋವಿಡ್ ಲಸಿಕೆ ಪಡೆಯುವವರಿಗೆ ಉಚಿತ ಗಾಂಜಾ ವಿತರಿಸುವ ಆತಂಕಕಾರೀ ತೀರ್ಮಾನವೊಂದು ವರದಿಯಾಗಿದೆ!

ಗಾಂಜಾ ಕೊಟ್ಟಾದರೂ ಲಸಿಕೆಯನ್ನು ಪ್ರೋತ್ಸಾಹಿಸುವ ತೀರ್ಮಾನನ್ನು ತೆಗೆದುಕೊಂಡಿರುವುದು ಅಮೇರಿಕಾದ ವಾಷಿಂಗ್ಟನ್ ಸ್ಟೇಟ್. ಹೀಗೆ ಮಾಡಿಯಾದರೂ ಲಸಿಕೆ ಪಡೆಯುವವರ ಸಂಖ್ಯೆಯನ್ನು ಹೆಚ್ಚಿಸಲು ಅದು ಪಣ ತೊಟ್ಟಿದೆ!

2012 ರಲ್ಲೇ ಅಮೇರಿಕಾದ ರಾಜ್ಯದಲ್ಲಿ ಗಾಂಜಾ ಮಾರಾಟವನ್ನು ಕಾನೂನು ಬದ್ಧಗೊಳಿಸಲಾಗಿದೆ. ಇದೀಗ ಇಪ್ಪತ್ತೊಂದು ವಯಸ್ಸಿಗಿಂತ ಮೇಲಿರುವ ಯಾರಾದರೂ ಲಸಿಕೆ ಹಾಕಿಸಿದರೆ, ಅಂಥವರಿಗೆ ಉಚಿತವಾಗಿ ಗಾಂಜಾವನ್ನೂ ಪಡೆಯಬಹುದಾಗಿದೆ.

ಮೊದಲು ಲಸಿಕೆ ಪಡೆಯುವವರಿಗೆ ಉಚಿತವಾಗಿ ಮದ್ಯವನ್ನು ಹಂಚಲಾಗಿತ್ತು. ಆದರೂ ಲಸಿಕೆ ಪಡೆಯುವವರ ಸಂಖ್ಯೆಯನ್ನು ನಿರೀಕ್ಷಿಸಿದಷ್ಟು ಹೆಚ್ಚಿಸಲು ಸಾಧ್ಯವಾಗಿರಲಿಲ್ಲ. ಅದರ ಮುಂದುವರಿದ ಭಾಗವಾಗಿ ಇದೀಗ  ಗಾಂಜಾ ವಿತರಿಸುವ ಯೋಜನೆಯನ್ನೂ ಹಾಕಿಕೊಂಡಿದೆ!

ವಾಷಿಂಗ್ಟನ್ ಸ್ಟೇಟಿನಲ್ಲಿ ಲಸಿಕೆ ಪಡೆದವರ ಪ್ರಮಾಣ ಐವತ್ತನಾಲ್ಕು ಶೇಕಡಾ ಇದ್ದು, ಇದು ಉಳಿದ ರಾಜ್ಯಗಳಿಗೆ ಹೋಲಿಸಿದರೆ ಅತೀ ಕಡಿಮೆ ಪ್ರಮಾಣ. ಹೀಗಾಗಿ ಲಸಿಕೆಯ ಜೊತೆಗೆ ಮದ್ಯ ಮತ್ತು ಗಾಂಜಾಗಳನ್ನು ವಿತರಿಸಲಾಗುತ್ತಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು