ಕೋವಿಡ್ ಲಸಿಕೆ ಕಡ್ಡಾಯಗೊಳಿಸಬಾರದು ಎಂದ ವಿಶ್ವ ಆರೋಗ್ಯ ಸಂಸ್ಥೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಜಿನೀವಾ(8-12-2020): ಕೋವಿಡ್ ಲಸಿಕೆಯನ್ನು ಜನರ ಮೇಲೆ ಕಡ್ಡಾಯಗೊಳಿಸಬಾರದೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವ್ಯಾಕ್ಸಿನನ್ನು ಕಡ್ಡಾಯಗೊಳಿಸುವುದು ತಪ್ಪಾದ ನಡೆಯಾಗಿದೆ. ಅದರ ಒಳಿತು-ಕೆಡುಕುಗಳ ಬಗೆಗೆ ಜನರಲ್ಲಿ ಜಾಗೃತಿ ಉಂಟು ಮಾಡಬೇಕಿದೆಯೆಂದು ಡಬ್ಲ್ಯುಎಚ್ಒ ಸಂಸ್ಥೆಯ ರೋಗ ನಿರೋಧಕ ಇಲಾಖೆಯ ತಜ್ಞ ಕೆಯಿಟ್ ಒಬ್ರಿಯನ್ ಅಭಿಪ್ರಾಯ ಪಟ್ಟಿದ್ದಾರೆ.

ಕೊರೋನಾ ಲಸಿಕೆ ಬಗೆಗೆ ವಿವಿಧ ದೇಶಗಳು ತಮ್ಮ ಪ್ರಜೆಗಳಿಗೆ ಯಾವ ರೀತಿಯಲ್ಲಿ ಜಾಗೃತಿ ಮೂಡಿಸಬಹುದೆಂಬ ಬಗೆಗೆ ವಿಶ್ವ ಆರೋಗ್ಯ ಸಂಸ್ಥೆಯು ಆಳವಾಗಿ ಅಧ್ಯಯನ ಮಾಡುತ್ತಿದೆ. ಯಾವುದೇ ದೇಶಗಳು ಕೊರೋನಾ ವ್ಯಾಕ್ಸಿನ್ ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸಿ ಆದೇಶ ನೀಡದು ಎಂಬುದು ತನ್ನ ನಿರೀಕ್ಷೆಯಾಗಿದೆಯೆಂದು ಒಬ್ರಿಯನ್ ಹೇಳಿದರು.

ಕೊರೋನಾ ಲಸಿಕೆ ಬಂದಿರುವುದು ಒಂದು ಒಳ್ಳೆಯ ಬೆಳವಣಿಗೆಯಾಗಿದೆ. ಎದುರಾಳಿಯಾಗಿರುವ ಸೂಕ್ಷ್ಮ ಜೀವಿಯ ವಿರುದ್ಧ ಮಾನವ ಸಾಮರ್ಥ್ಯದ ವಿಜಯ ಇದಾಗಿದೆಯೆಂದು ಅವರು ಸಂತಸ ವ್ಯಕ್ತಪಡಿಸಿದರು.

ಅದೇ ವೇಳೆ ವ್ಯಾಕ್ಸಿನ್ ಕಡ್ಡಾಯಗೊಳಿಸಿ ಕಾನೂನುಗಳನ್ನು ತರುವುದು ಸರಿಯಾದ ನಡೆ ಅಲ್ಲ. ರೋಗಿಗಳ ಮತ್ತು ಆರೋಗ್ಯ ಕಾರ್ಯಕರ್ತರ, ಆರೋಗ್ಯ ಮುಂಜಾಗ್ರತೆಗಾಗಿ ಅದರಲ್ಲೂ ಉಸಿರಾಟ ಸಂಬಂಧೀ ವೈದ್ಯಕೀಯ ತಜ್ಞರು, ತೀವ್ರ ನಿಗಾ ವಿಭಾಗದಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಕೊರೋನಾ ವ್ಯಾಕ್ಸಿನ್ ಅಗತ್ಯ ಬೀಳುವ ಸಾಧ್ಯತೆಯಿದೆಯೆಂದು ಅವರು ವಿವರಿಸಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು