15 ವರ್ಷ ಮೇಲ್ಪಟ್ಟ ವರಿಗೆ ಇಂದಿನಿಂದ ಲಸಿಕಾ ಅಭಿಯಾನ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೋವಿಡ್-19 ಸಾಂಕ್ರಾಮಿಕದ ಮೂರನೇ ಅಲೆಯ ಸ್ಪಷ್ಟ ಸೂಚನೆ ಕಂಡುಬಂದಿರುವ ಬೆನ್ನಲ್ಲೇ, 15 ರಿಂದ 18 ವವರ್ಷ ವಯಸ್ಸಿನವರಿಗೆ ಕೋವಿಡ್-19 ವಿರುದ್ಧದ ಲಸಿಕೆ ನೀಡಿಕೆ ಇಂದಿನಿಂದ ದೇಶಾದ್ಯಂತ ಆರಂಭವಾಗಲಿದೆ. ಆದರೆ ಭಾರತ್ ಬಯೋಟೆಕ್ ದೇಶೀಯವಾಗಿ ಉತ್ಪಾದಿಸಿದ ಕೋವ್ಯಾಕ್ಸಿನ್ ಲಸಿಕೆಯನ್ನು ಮಾತ್ರ ಈ ವಯೋವರ್ಗದವರಿಗೆ ನೀಡಲಾಗುತ್ತಿದೆ. ಈ ವರ್ಗಕ್ಕೆ ಲಸಿಕೆ ನೀಡುವ ಉದ್ದೇಶದಿಂದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿ ಲಸಿಕಾ ಡೋಸ್‌ಗಳನ್ನು ಕಳುಹಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

ಜನವರಿ 3ರಿಂದ 15-18 ವರ್ಷದೊಳಗಿನ ಯುವಕರಿಗೆ ಲಸಿಕೆ ನೀಡಿಕೆಯ ನಿರ್ಧಾರವನ್ನು ಕಳೆದ ಡಿಸೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದರು. ಸೋಂಕಿನ ಅಪಾಯ ಸಾಧ್ಯತೆ ಅಧಿಕ ಇರುವ ವರ್ಗಕ್ಕೆ ಜನವರಿ 10ರಂದು ಮೂರನೇ ಡೋಸ್ (ಬೂಸ್ಟರ್ ಡೋಸ್) ನೀಡಿಕೆ ಆರಂಭವಾಗಲಿದೆ.

2007 ಅಥವಾ ಅದಕ್ಕೂ ಮೊದಲು ಜನಿಸಿದವರಿಗೆ ಹೊಸದಾಗಿ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆ ಹೇಳಿದೆ. 15-18ರ ವರ್ಗಕ್ಕೆ ಲಸಿಕೆ ನೀಡಲು ಪ್ರತ್ಯೇಕ ಸರದಿಯನ್ನು ಆರಂಭಿಸುವಂತೆ ಎಲ್ಲ ರಾಜ್ಯಗಳಿಗೆ ಸೂಚಿಸಲಾಗಿದ್ದು, ಈ ಮೂಲಕ ವಯಸ್ಕರಿಗೆ ಲಸಿಕೆ ನೀಡಿಕೆ ಪ್ರಕ್ರಿಯೆಯಲ್ಲಿ ಆಗುವ ಗೊಂದಲ ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ.

ಸಂಭಾವ್ಯ ಫಲಾನುಭವಿಗಳು ಕೋವಿನ್ ಪೋರ್ಟೆಲ್‌ನಲ್ಲಿ ಜನವರಿ 1ರಿಂದ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದಾಗ್ಯೂ ಹಲವು ಲಸಿಕಾ ಕೇಂದ್ರಗಳಲ್ಲಿ ನೇರವಾಗಿ ಲಸಿಕೆ ಪಡೆಯಲೂ ಅವಕಾಶ ಕಲ್ಪಿಸಲಾಗಿದೆ. ಹಾಲಿ ಲಸಿಕಾ ಕೇಂದ್ರಗಳಲ್ಲಿ ಈ ವರ್ಗಕ್ಕಾಗಿ ಪ್ರತ್ಯೇಕ ಸರದಿ ವ್ಯವಸ್ಥೆ ಮಾಡಿದ್ದರೆ, ಈ ವರ್ಗಕ್ಕಾಗಿಯೇ ವಿಶೇಷವಾಗಿ ಕೆಲ ಲಸಿಕಾ ಕೇಂದ್ರಗಳನ್ನು ಆರಂಭಿಸಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು