ಕೋವಿಡ್ ಲಸಿಕೆಯ ಬಳಿಕ ಇದೀಗ ಕೋವಿಡ್ ರೋಗದ ಮಾತ್ರೆಗಳೂ ಸಿದ್ಧವಾಗಿದೆ!

Share on facebook
Share on twitter
Share on linkedin
Share on whatsapp
Share on telegram
Share on email
Share on print

ನ್ಯೂಯಾರ್ಕ್: ಕೋರೋನಾ ಮಹಾಮಾರಿಯು ಜಗತ್ತನ್ನು ತನ್ನ ನಿಯಂತ್ರಣಕ್ಕೆ ಪಡೆದ ಬಳಿಕ, ಕೊರೋನಾದಿಂದ ಮುಕ್ತಿ ಪಡೆಯಲು ಜಗತ್ತಿನಾದ್ಯಂತ ಬಹಳಷ್ಟು ಪ್ರಯತ್ನಗಳು ನಡೆದಿವೆ. ವಿವಿಧ ವೈದ್ಯಕೀಯ ಕಂಪೆನಿಗಳು ಲಸಿಕೆಯನ್ನು ತಯಾರಿಸಲು ತೊಡಗಿ, ಅದರಲ್ಲಿ ಸಾಕಷ್ಟು ಯಶಸ್ಸನ್ನೂ ಕಂಡಿದೆ.

ಹೀಗೆ ಪ್ರಯತ್ನಿಸಿ ಯಶಸ್ವಿಯಾದವರಲ್ಲಿ ಅಮೇರಿಕಾದ ಕಂಪೆನಿಯಾದ ಫೈಸರ್ ಮೊದಲನೆಯದು. ಫೈಸರ್, ಕೋವಿಡ್ ರೋಗಿಗಳ ಮೇಲೆ ಪ್ರಯೋಗಿಸಲು ಅನುಮತಿಸಲಾದ ಜಗತ್ತಿನ ಮೊತ್ತಮೊದಲ ಲಸಿಕೆಯಾಗಿದ್ದು, ಜಗತ್ತಿನ ಪಾಲಿಗೆ ಸಾಂತ್ವನವಾಗಿ ಪರಿಣಮಿಸಿತ್ತು. ಜಗತ್ತಿನ ಹಲವು ದೇಶಗಳೂ ಇದರ ಬಳಕೆಗೆ ಅನುಮತಿ ನೀಡಿದೆ.

ಇದೀಗ ಅದೇ ಕಂಪೆನಿಯು ಕೋವಿಡ್ ರೋಗದ ಮಾತ್ರೆಗಳನ್ನೂ ತಯಾರು ಮಾಡಿದೆ. ಈಗಾಗಲೇ ಮಾತ್ರೆಗಳನ್ನು ಮನುಷ್ಯರ ಮೇಲೆ ಪರೀಕ್ಷಾರ್ಥವಾಗಿ ಪ್ರಯೋಗಿಸಲಾಗುತ್ತಿದೆ ಎಂದು ಫೈಸರ್ ಕಂಪೆನಿಯು ಹೇಳಿಕೊಂಡಿದೆ.

ಕೊರೋನಾ ತಗುಲಿದ ತಕ್ಷಣ ಮಾತ್ರೆಗಳನ್ನು ನುಂಗಿದರೆ, ದೇಹದಲ್ಲಿ ವೈರಸ್ ಇನ್ನಷ್ಟು ಹರಡಿಕೊಳ್ಳುವುದನ್ನು ತಡೆಯುತ್ತದೆ. ಮತ್ತು ಗಂಭೀರಾವಸ್ಥೆಗೆ ತಲುಪುವುದು ತಪ್ಪುತ್ತದೆ. ಪ್ರೊಟೀಸ್ ಎಂಬ ಪ್ರೊಟೀನು ವೈರಸ್ ಹರಡುವುದನ್ನು ತಡೆಯುವುದು. ಪ್ರೊಟೀನನ್ನು ಹೆಪಟೈಟಿಸ್ಸಿ, ಏಡ್ಸ್ ಇತ್ಯಾದಿ ವೈರಸ್ ರೋಗಗಳ ಚಿಕಿತ್ಸೆಯಲ್ಲೂ ಬಳಸಲಾಗುತ್ತದೆ.

ಫೈಸರ್ ಮಾತ್ರೆಗಳನ್ನು ಮನುಷ್ಯರ ಮೇಲೆ ಪರೀಕ್ಷಾರ್ಥವಾಗಿ ಪ್ರಯೋಗಿಸುವ ಪ್ರಕ್ರಿಯೆ ಅಮೇರಿಕಾದಲ್ಲಿಯೇ ನಡೆಯುತ್ತಿದೆ. ಅತಿ ಶೀಘ್ರದಲ್ಲಿಯೇ ಇದರ ಫಲಿತಾಂಶವು ಜಾಹೀರುಗೊಳ್ಳಲಿದೆಯೆಂದು ನಿರೀಕ್ಷಿಸಲಾಗಿದೆ.

ಫೈಸರ್ ಅಲ್ಲದೇಮೆರ್ಕ್ ಆ್ಯಂಡ್ ಕೋ.’ ಎಂಬ ಕಂಪೆನಿಯೂ ಕೋವಿಡ್ ಮಾತ್ರೆಯ ತಯಾರಿಕೆಯಲ್ಲಿ ತೊಡಗಿಕೊಂಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು