ಕೋವಿಡ್ ಉಲ್ಬಣ: ಭಾರತವನ್ನು ಕೆಂಪು ಪಟ್ಟಿಗೆ ಸೇರಿಸಿದ ಬ್ರಿಟನ್ | ಪಾಕಿಸ್ತಾನದಿಂದಲೂ ನಿರ್ಬಂಧ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಲಂಡನ್: ಭಾರತದಾದ್ಯಂತ ಹಿಂದೆಂದೂ ಕಂಡು ಬರದಷ್ಟು ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ದೇಶಗಳು ಭಾರತೀಯ ಪ್ರಯಾಣಿಕರಿಗೆ ನಿರ್ಬಂಧಗಳನ್ನು ವಿಧಿಸುತ್ತಿವೆ.

ಬ್ರಿಟನ್ ಸರಕಾರವು ಭಾರತವನ್ನುಕೆಂಪು ಪಟ್ಟಿಗೆ ಸೇರಿಸಿದ್ದು, ಭಾರತದಿಂದ ಬರುವ ಎಲ್ಲಾ ರೀತಿಯ ಪ್ರಯಾಣನ್ನೂ ರದ್ದು ಪಡಿಸಿದೆ. ಭಾರತದಿಂದ ಮರಳುವ ಬ್ರಿಟನ್ ಪ್ರಜೆಗಳಿಗೂ ಹತ್ತು ದಿನದ ಕಡ್ಡಾಯ ಕ್ವಾರಂಟೈನ್ ನಿಗದಿ ಪಡಿಸಿದೆ.

ಅಂಕಿ ಅಂಶಗಳನ್ನು ಪರಿಶೀಲಿಸಿ, ಕಠಿಣವಾದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಬ್ರಿಟನ್ ಆರೋಗ್ಯ ಕಾರ್ಯದರ್ಶಿ ತಿಳಿಸಿದ್ದಾರೆ. ಭಾರತಕ್ಕೆ ಭೇಟಿ ನೀಡಲಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಕೂಡಾ ತಮ್ಮ ಪ್ರವಾಸವನ್ನು ಈಗಾಗಲೇ ರದ್ದು ಪಡಿಸಿದ್ದಾರೆ.

ಪಾಕಿಸ್ತಾನದಿಂದಲೂ ನಿರ್ಬಂಧ

ನೆರೆಯ ಪಾಕಿಸ್ತಾನವೂ ಭಾರತೀಯ ಪ್ರಯಾಣಿಕರಿಗೆ ನಿರ್ಬಂಧವನ್ನು ವಿಧಿಸಿದೆ.  ಭಾರತವನ್ನುಸಿವರ್ಗಕ್ಕೆ ಸೇರಿಸುವ ಮೂಲಕ ಇನ್ನೆರಡು ವಾರಗಳ ಕಾಲ ಭಾರತೀಯರು ಪಾಕಿಸ್ತಾನಕ್ಕೆ ಪ್ರಯಾಣ ಮಾಡುವುದಕ್ಕೆ ತಡೆ ಹಾಕಿದೆ.

ಬ್ರಿಟನ್, ಪಾಕಿಸ್ತಾನಗಳಲ್ಲದೇ ಕೊಲ್ಲಿ ದೇಶಗಳೂ ಸೇರಿದಂತೆ ಹಲವು ದೇಶಗಳು ಭಾರತದಿಂದ ಪ್ರಯಾಣಿಸುವವರಿಗೆ ಹಲವು ಕಠಿಣ ಮಾರ್ಗಸೂಚಿಗಳನ್ನು ಪ್ರಕಟಿಸಿವೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು