ಕೋವಿಡ್ ತೀವ್ರಗೊಂಡ ಹಿನ್ನೆಲೆ | ಭಾರತದ ಗಡಿಯನ್ನು ಮುಚ್ಚಿದ ಬಾಂಗ್ಲಾದೇಶ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಢಾಕ: ಭಾರತದಲ್ಲಿ ಕೋವಿಡ್ ಎರಡನೇ ಅಲೆಯು ತೀವ್ರವಾದ ಹಿನ್ನೆಲೆಯಲ್ಲಿ ಬಾಂಗ್ಲಾದೇಶವು ಭಾರತದ ಗಡಿಯನ್ನು ಮುಚ್ಚಿದೆ.

ಬಾಂಗ್ಲಾ ಪ್ರಧಾನಮಂತ್ರಿಯ ಕಛೇರಿಯಿಂದ ಭಾರತದ ಗಡಿಯನ್ನು ಹದಿನಾಲ್ಕು ದಿನಗಳ ವರೆಗೆ ಮುಚ್ಚುವ ಆದೇಶ ಬಂದಿದೆಯೆಂದು ಬಾಂಗ್ಲಾದೇಶ ಗೃಹಮಂತ್ರಿ ಅಸದುಝ್ಝಮಾನ್ ಖಾನ್ ಹೇಳಿದ್ದಾರೆ. ಈ ಕುರಿತು ಢಾಕ ಟ್ರಿಬ್ಯುನಲ್ ವರದಿ ಮಾಡಿದೆ.

ಗುರುವಾರದಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಭಾರತದ ಗಡಿಯನ್ನು ಮುಚ್ಚುವ ಪ್ರಸ್ತಾಪವನ್ನು ತಳ್ಳಿ ಹಾಕಲಾಗಿತ್ತು. ಆದರೆ ಭಾರತದಲ್ಲಿ ಕೋವಿಡ್ ಸೋಂಕು ಅನಿಯಂತ್ರಿತವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ ತೀರ್ಮಾನವನ್ನು ಬದಲಿಸಲಾಗಿದೆಯೆಂದು ವರದಿಯಿದೆ.

ಈಗಾಗಲೇ ಯುಎಇ, ಇರಾನ್, ಜರ್ಮನಿ, ಯುಕೆ, ಹಾಂಕಾಂಗ್ ಮೊದಲಾದ ದೇಶಗಳು ಭಾರತದ ಜೊತೆಗಿನ ಎಲ್ಲಾ ವೈಮಾನಿಕ ಸೇವೆಗಳನ್ನು ರದ್ದುಗೊಳಿಸಿವೆ.

ನಿನ್ನೆಯ ದಿನ ಭಾರತದಲ್ಲಿ 3,49,691 ಪ್ರಕರಣಗಳು ದಾಖಲಾಗಿದ್ದು, ಇದು ವರೆಗೆ ದಾಖಲಾದ ದೈನಂದಿನ ಪ್ರಕರಣಗಳಲ್ಲೇ ಅತೀ ಹೆಚ್ಚಿನದು. ನಿನ್ನೆ ಒಟ್ಟು 2767 ಕೋವಿಡ್ ರೋಗಿಗಳು ಮೃತಪಟ್ಟಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು