ಕೋವಿಡ್ ತಗುಲಿದವರ ಕುಟುಂಬಗಳಿಗೆ ಉಚಿತ ಆಹಾರ ಸಾಮಾಗ್ರಿಗಳ ಕಿಟ್ : ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಘೋಷಣೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಚಂದೀಗಢ್: ಕೋವಿಡ್ ಹರಡುವಿಕೆ, ಲಾಕ್ಡೌನ್, ಉದ್ಯೋಗ ನಷ್ಠ, ಉದ್ಯೋಗಕ್ಕೆ ಹೋಗಲು ಸಾಧ್ಯವಾಗದಿರುವ ಪರಿಸ್ಥಿತಿ ಇತ್ಯಾದಿಗಳಿಂದ ಸಂಕಷ್ಟಕ್ಕೀಡಾದ ಪಂಜಾಬ್ ಜನರೆಡೆಗೆ ಅಲ್ಲಿನ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ನೆರಳಾಗಿ ಧಾವಿಸಿದ್ದಾರೆ.

ಕೋವಿಡ್ ಬಾಧಿತರಿರುವ ಕುಂಟುಂಬಗಳಿಗೆ ಉಚಿತವಾಗಿ ಆಹಾರ ಸಾಮಾಗ್ರಿಗಳ ಕಿಟ್ಟುಗಳನ್ನು ವಿತರಿಸಲಾಗುವುದೆಂದು ಘೋಷಣೆ ಮಾಡಿದ್ದಾರೆ. ಈಗಾಗಲೇ ಒಂದು ಲಕ್ಷ ಕಿಟ್ಟುಗಳು ವಿತರಣೆಗೆ ಸಿದ್ಧವಾಗಿದ್ದು, ಅಗತ್ಯ ಬಂದಂತೆ ಇನ್ನಷ್ಟು ಕಿಟ್ಟುಗಳು ತಯಾರಿಸಲಾಗುತ್ತದೆ ಎಂದು ಅಮರೀಂದರ್ ಸಿಂಗ್ ಹೇಳಿದ್ದಾರೆ.

ಪ್ರತಿ ಕಿಟ್ಟಿನಲ್ಲೂ ಹತ್ತು ಕೆಜಿ ಗೋಧಿ, ಎರಡು ಕೆಜಿ ಸಕ್ಕರೆ ಮತ್ತು ಎರಡು ಕೆಜಿ ಕಡಲೆ ಇರುವುದು. ಕೋವಿಡಿನ ಎರಡನೇ ಅಲೆಯು ಪಂಜಾಬಿನಲ್ಲೂ ಸಾಕಷ್ಟು ಸಂಕಷ್ಟಗಳನ್ನು ತಂದೊಡ್ಡಿದೆ. ನಿಯಂತ್ರಣದ ಭಾಗವಾಗಿ ರಾತ್ರಿ ಕರ್ಫ್ಯೂ, ವಾರಾಂತ್ಯ ಲಾಕ್ಡೌನ್ ಜಾರಿಯಲ್ಲಿದೆ.

ನಿನ್ನೆ 6472 ಹೊಸ ಕೋವಿಡ್ ಪ್ರಕರಣಗಳು ಪಂಜಾಬಿನಲ್ಲಿ ದಾಖಲಾಗಿದೆ. ಸದ್ಯ ಚಿಕಿತ್ಸೆಯಲ್ಲಿರುವ ಕೋವಿಡ್ ರೋಗಿಗಳ ಸಂಖ್ಯೆ 53426 ಕ್ಕೆ ಏರಿದೆ. ವರೆಗೆ 8772 ಜನರು ಕೋವಿಡ್ ತಗುಲಿ ಮೃತಪಟ್ಟಿದ್ದಾರೆ.

ಪಂಜಾಬ್ ರಾಜ್ಯದ ನಗರಗಳಿಗಿಂತಲೂ ಗ್ರಾಮ ಪ್ರದೇಶಗಳಲ್ಲೇ ಕೋವಿಡ್ ಹರಡುವಿಕೆ ತೀವ್ರವಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು