ಕೋವಿಡ್ ತಗುಲಿ ಯುವತಿಯ ಮರಣ | ಆಕ್ರೋಶಗೊಂಡ ಸಂಬಂಧಿಕರಿಂದ ಆಸ್ಪತ್ರೆ ಧ್ವಂಸ, ಅಗ್ನಿ ಸ್ಪರ್ಶ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಹಾರಾಷ್ಟ್ರ: ಇಪ್ಪತ್ತೊಂಭತ್ತು ವರ್ಷ ವಯಸ್ಸಿನ  ಯುವತಿಯೊಬ್ಬಳು ಕೋವಿಡ್ ತಗುಲಿ ಮೃತಪಟ್ಟಿದ್ದು, ಆಕ್ರೋಶಗೊಂಡ ಸಂಬಂಧಿಕರು ಆಸ್ಪತ್ರೆಯನ್ನು ಧ್ವಂಸಗೊಳಿಸಿದ ಘಟನೆ ವರದಿಯಾಗಿದೆ.

ಮಹಾರಾಷ್ಟ್ರದ ನಾಗ್ಪುರ್ ಜಿಲ್ಲೆಯಲ್ಲಿ ಘಟನೆಯು ಸಂಭವಿಸಿದೆ. ಘಟನೆಯ ದೃಶ್ಯಾವಳಿಗಳು ಆಸ್ಪತ್ರೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಹತ್ತು ಮಂದಿಯನ್ನು ಬಂಧಿಸಲಾಗಿದೆ.

ಯುವತಿಯ ಕುಟುಂಬಿಕರು ಆಸ್ಪತ್ರೆಯನ್ನು ಧ್ವಂಸಗೊಳಿಸಿದ್ದಲ್ಲದೇ, ರಿಸಿಪ್ಷನಿಗೆ ಬೆಂಕಿಯನ್ನೂ ಕೊಟ್ಟಿದ್ದಾರೆ. ರಿಸಿಪ್ಷನಿನಲ್ಲಿರುವ ಮೇಜಿಗೆ ಪೆಟ್ರೋಲ್ ಸುರಿದು ಬೆಂಕಿ ಕೊಟ್ಟರಾದರೂ, ಆಸ್ಪತ್ರೆಯ ಸಿಬ್ಬಂದಿಗಳು ಅದನ್ನು ಸಕಾಲದಲ್ಲಿ ನಂದಿಸಿದ ಕಾರಣದಿಂದಾಗಿ ದೊಡ್ಡ ಅನಾಹುತವುಂಟಾಗುವುದು ತಪ್ಪಿ ಹೋಗಿದೆ.

ಯುವತಿಯ ಸಾವಿನ ಕುರಿತಂತೆ ಯುವತಿಯ ಪತಿ ಮತ್ತು ವೈದ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಸಂಬಂಧಿಕರ ಸಹಾಯದೊಂದಿಗೆ ಆಸ್ಪತ್ರೆಯನ್ನು ಧ್ವಂಸಗೊಳಿಸಿ, ಬೆಂಕಿ ಕೊಡಲಾಗಿದೆ. ಘಟನೆಗೆ ಸಂಬಂಧಿಸಿ ಒಟ್ಟು ಹನ್ನೊಂದು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಒಬ್ಬನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೋಲೀಸರು ತಿಳಿಸಿದ್ದಾರೆ.

ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿ ಯುವತಿಯು ಸಾವಿಗೀಡಾಗಿದ್ದಾಳೆ. ಮೃತದೇಹವನ್ನು ಹಸ್ತಾಂತರಿಸಲು ಒಂದೂವರೆ ಲಕ್ಷ ರೂಪಾಯಿಯ ಬಿಲ್ಲನ್ನು ಪಾವತಿಸುವಂತೆ ಆಸ್ಪತ್ರೆಯು ಶರತ್ತು ವಿಧಿಸಿತ್ತು ಎಂದು ಮೃತಪಟ್ಟ ರೋಗಿಯ ಸಂಬಂಧಿಕರು ಆರೋಪಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು