ಕೋವಿಡ್ ತಗುಲಿ ಐದು ತಿಂಗಳ ಹಸುಗೂಸಿನ ಮರಣ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಕೋವಿಡ್ ತಗುಲಿ ಐದು ತಿಂಗಳಷ್ಟೇ ಪ್ರಾಯವಿರುವ ಹಸುಗೂಸೊಂದು ಮರಣ ಹೊಂದಿದ ಬಹಳ ಬೇಸರ ಮೂಡಿಸುವ ಘಟನೆ ಜರುಗಿದೆ.

ಈಶಾನ್ಯ ದೆಹಲಿಯ ಸೀಮಾಪುರಿ ಎಂಬಲ್ಲಿ ಪ್ರಹ್ಲಾದ್ ಎಂಬವರ ಪರಿ ಎಂಬ ಹೆಸರಿನ ಹೆಣ್ಣು ಮಗುವೇ ಕೋವಿಡಿಗೆ ಬಲಿಯಾಗಿರುವುದು. ಮಗುವಿಗೆ ಹದಿನೈದು ದಿನಗಳ ಮೊದಲು ಜ್ವರ ಬಂದಿತ್ತು. ಸಾಮಾನ್ಯ ಜ್ವರಕ್ಕೆ ಕೊಡುವ ಮದ್ದನ್ನೇ ಕೊಡಲಾಗಿತ್ತು.

ಜ್ವರ ಮತ್ತಷ್ಟು ಉಲ್ಬಣಗೊಂಡಾಗ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಿದಾಗ ಕೋವಿಡ್ ತಗುಲಿರುವುದು ದೃಢ ಪಟ್ಟಿದೆ. ಆರು ದಿನಗಳ ಕಾಲ ವೆಂಟಿಲೇಟರಿನಲ್ಲಿದ್ದ ಮಗು ಕೊನೆಗೂ ಶ್ವಾಸಕೋಶದ ವೈಫಲ್ಯದಿಂದ ಮರಣಕ್ಕೀಡಾಗಿದೆ.

ಮೂವತ್ತೈದು ವರ್ಷ ವಯಸ್ಸಿನ ಪ್ರಹ್ಲಾದ್, ತನ್ನ ಮಗುವನ್ನು ಉಳಿಸಿಕೊಳ್ಳಲು ಹೆಣಗಾಡಿದ್ದಾರೆ. ತಿಂಗಳಿಗೆ ಒಂಭತ್ತು ಸಾವಿರ ವೇತನಕ್ಕೆ ದುಡಿಯುತ್ತಿದ್ದ ಪ್ರಹ್ಲಾದ್, ಲಾಕ್ಡೌನ್ ಬಳಿಕ ಆತನ ಕಿರಿಯ ಸಹೋದರ ಜೊತೆಗೆ ಈತನೂ ನಿರುದ್ಯೋಗಿಯಾಗಿದ್ದ. ಕುಟುಂಬವು ಅದಾಗಲೇ ಆರ್ಥಿಕ ಸಂಕಷ್ಟಕ್ಕೆ ಈಡಾಗಿತ್ತು. ‘ನನ್ನ ಮಗುವೂ ನನ್ನಿಂದ ನಷ್ಟಗೊಂಡಿತು, ಹಣವೂ ಹೋಯಿತು. ಎಲ್ಲವನ್ನೂ ಕಳೆದುಕೊಂಡೆ.’ ಎಂದು ತನ್ನ ಅಳಲನ್ನು ತೋಡಿಕೊಳ್ಳುತ್ತಿದ್ದಾನೆ.

ಎರಡು ವರ್ಷ ವಯಸ್ಸಿನ ತನ್ನ ಇನ್ನೊಂದು ಮಗುನನ್ನ ಪಾಪು ಎಲ್ಲಿ?’ ಎಂದು ಕೇಳುವಾಗಲೆಲ್ಲಾ ಮಾನಸಿಕವಾಗಿ ಕುಗ್ಗಿ ಮರುಮಾತಿಲ್ಲದವನಾಗುತ್ತಾನೆ. ಕುಟುಂಬದ ಎಲ್ಲರನ್ನೂ ಆರ್ ಟಿಪಿಸಿಆರ್ ಪರೀಕ್ಷೆಗೊಳಪಡಿಸಿದಾಗ ಎಲ್ಲರಿಗೂ ನೆಗೆಟಿವ್ ಬಂದಿತ್ತಾದರೂ, ಮಗುವಿಗೆ ಹೇಗೆ ಕೋವಿಡ್ ಬಾಧಿಸಿತು ಎಂಬ ಬಗ್ಗೆ ಆತನಿಗೆ ದಿಗ್ಭ್ರಮೆ ಮೂಡುತ್ತಿದೆ.

ಸೀಮಾಪುರದ ಸ್ಮಶಾನದಲ್ಲೂ ಕಳೆದೊಂದು ವರ್ಷದಿಂದ ಇಷ್ಟೊಂದು ಕಿರಿಯ ಪ್ರಾಯದ ಮಗುವಿನ ಅಂತ್ಯ ಸಂಸ್ಕಾರ ಮಾಡಿರಲಿಲ್ಲವೆನ್ನಲಾಗುತ್ತಿದೆ. ಕೋವಿಡ್ ಕಾರಣದಿಂದ ಮಗುವಿನ ಹೆಸರನ್ನೂ ನೋಂದಣಿ ಮಾಡಲು ಸಾಧ್ಯವಾಗಿರಲಿಲ್ಲ. ಪ್ರೀತಿಯಿಂದ ಕರೆಯುತ್ತಿದ್ದ ಪರಿ ಎಂಬ ಹೆಸರನ್ನೇ ಮರಣ ಪ್ರಮಾಣ ಪತ್ರಕ್ಕೂ ಕೊಡಲಾಗಿದೆಯೆಂದು ಪ್ರಹ್ಲಾದ್ ಹೇಳುತ್ತಾನೆ.

ಭಾರತದಾದ್ಯಂತ ಕಳೆದ ಇಪ್ಪತ್ತನಾಲ್ಕು ಗಂಟೆಯಲ್ಲಿ 3,43,144 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 4000 ಸಾವುಗಳು ಸಂಭವಿಸಿವೆ. ದೆಹಲಿಯೊಂದರಲ್ಲೇ ಹೊಸದಾಗಿ 77,717 ಪ್ರಕರಣಗಳು ದಾಖಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು