ಕೋವಿಡ್ : ತೆಲಂಗಾಣ, ಮಹಾರಾಷ್ಟ್ರ ಸೇರಿ 5 ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಕೊರೊನಾ ಎರಡನೇ ಅಲೆಯ ಸೋಂಕು ಪ್ರಮಾಣ ಸ್ವಲ್ಪ ಇಳಿಮುಖ ಕಂಡರೂ ಸಾವಿನ ಪ್ರಮಾಣ ಇನ್ನೂ ಹಾಗೆ ಇದೆ, ಸೋಂಕು ನಿಯಂತ್ರಣಕ್ಕೆ ಇನ್ನೂ ಲಾಕ್ ಡೌನ್ ಅಗತ್ಯ ಎಂದು ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಐದು ರಾಜ್ಯಗಳಲ್ಲಿ ಕೋವಿಡ್-19 ಹರಡುವಿಕೆ ತಡೆಗೆ ವಿಧಿಸಲಾಗಿರುವ ಲಾಕ್‌ಡೌನ್‌ ವಿಸ್ತರಿಸಲಾಗಿದೆ.

ತೆಲಂಗಾಣದಲ್ಲಿ 10 ದಿನಗಳ ಕಾಲ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದ್ದು, ಜೂನ್ 9ರ ವರೆಗೆ ಮುಂದುವರಿಯಲಿದೆ. ಆದರೆ, ಇದೀಗ ಲಾಕ್‌ಡೌನ್‌ ವಿಸ್ತರಣೆಯ ದಿನಗಳಲ್ಲಿ ಬೆಳಿಗ್ಗೆ 6ರಿಂದ ಮಧ್ಯಾಹ್ನ 1ಗಂಟೆ ವರೆಗೆ ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತೆಲಂಗಾಣ ಸಿಎಂ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಜೂನ್ 15ರ ವರೆಗೆ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. ಕೋವಿಡ್‌ ಪಾಸಿಟಿವಿಟಿ ದರ, ಆಮ್ಲಜಕ ಹಾಸಿಗೆಗಳ ಲಭ್ಯತೆ ನೋಡಿಕೊಂಡು ಆಯಾ ಪ್ರದೇಶಗಳಿಗೆ ಅನುಗುಣವಾಗಿ ಹೆಚ್ಚಿನ ವಿನಾಯಿತಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಹಾಗೇ ಹರಿಯಾಣ, ಒಡಿಶಾ ಮತ್ತು ಸಿಕ್ಕಿಂಗಳಲ್ಲೂ ಲಾಕ್‌ಡೌನ್ ಅವಧಿ ವಿಸ್ತರಿಸಲಾಗಿದೆ. ಕರ್ನಾಟಕದಲ್ಲಿ ಜೂನ್ 7 ರಂದು ಮುಗಿಯುವ ಲಾಕ್ ಡೌನ್ ವಿಸ್ತರಣೆ ಆಗುತ್ತಾ? ಅಥವಾ ಅನ್ ಲಾಕ್ ಆಗುತ್ತಾ ಎನ್ನುವುದು ಇನ್ನೂ ಮಾಹಿತಿ ಇಲ್ಲ, ಲಾಕ್ ಡೌನ್ ವಿಸ್ತರಿಸುವ ಬಗ್ಗೆ ತಜ್ಞರು ಯಾವುದೇ ವರದಿ ನೀಡಿಲ್ಲ ಎಂದು ಸಿಎಂ ಬಿ.ಎಸ್.ವೈ‌. ಹೇಳಿದ್ದಾರೆ. ಆದರೆ ರಾಜ್ಯದಲ್ಲಿ ಹೊಸ ಕೇಸ್ ಪ್ರಕರಣ ಇಳಿಮುಖ ಕಂಡರೂ ಸಾವಿನ ಸಂಖ್ಯೆಯಲ್ಲಿ ಇಳಿಮುಖ ಆಗಿಲ್ಲ. ಪಾಸಿಟಿವ್ ರೇಟ್ 10ಕ್ಕಿಂತ ಕಡಿಮೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸಿಎಂ ತಿಳಿಸಿದ್ದಾರೆ. ಆದರೆ ಇನ್ನೂ ಕೆಲವೊಂದು ಜಿಲ್ಲೆಯಲ್ಲಿ ಸೋಂಕು ತಕ್ಕಮಟ್ಟಿಗೆ ಇಳಿಮುಖ ಆಗಿಲ್ಲ.

ಬೀದರ ಸೇರಿದಂತೆ ಕೆಲವು ಜಿಲ್ಲೆಯಲ್ಲಿ ಸೋಂಕು ಪ್ರಮಾಣ ಸಂಪೂರ್ಣವಾಗಿ ಹತೋಟಿಗೆ ಬಂದಿದೆ. ಸೋಂಕು ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಿಗೆ ಲಾಕ್ ಡೌನ್ ಸಡಿಲಿಕೆ ಮಾಡಿ ಉಳಿದ ಜಿಲ್ಲೆಯಲ್ಲಿ ಲಾಕ್ ಡೌನ್ ವಿಸ್ತರಿಸುವ ಕುರಿತು ಚಿಂತನೆ ನಡೆದಿದೆಯಾ? ಅಥವಾ ಇನ್ನೂ ಒಂದು ವಾರ ಇಡೀ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ವಿಸ್ತರಣೆಯಾಗುತ್ತಾ ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಜೂನ್ 5, 6 ರಂದು ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು