ಕೋವಿಡ್ ತಗುಲಿ ಗರ್ಭಿಣಿಯ ಮರಣ | ಅಗಲಿದ ನೋವಿನಲ್ಲಿ ಸಚಿವರಿಗೆ ಅವಾಚ್ಯ ಶಬ್ಧಗಳಿಂದ ಬೈದ ಮೃತರ ಬಂಧುಗಳ ವಿರುದ್ಧ ಕೇಸು ದಾಖಲು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಚಿಕ್ಕಬಳ್ಳಾಪುರ: ಕೋವಿಡ್ ತಗುಲಿ ಗರ್ಭಿಣಿಯೊಬ್ಬರು ಮೃತಪಟ್ಟಿದ್ದು, ಅಗಲಿದ ನೋವಿನಲ್ಲಿ ಸಚಿವರ ವಿರುದ್ಧ ಅವಾಚ್ಯ ಶಬ್ಧಗಳನ್ನು ಬಳಸಿದ ಮೃತರ ಕುಟುಂಬಿಕರ ಮೇಲೆ ಪ್ರಕರಣ ದಾಖಲಾಗಿದೆ.

ಚಿಂತಾಮಣಿ ತಾಲ್ಲೂಕು ಮಲ್ಲಿಕಾರ್ಜುನಪುರದ ಗರ್ಭಿಣಿ ಅನುಪಮಾ ಎಂಬವರೇ ಕೋವಿಡ್ ತಗುಲಿ ಮೃತಪಟ್ಟವರು. ಇವರ ತಂದೆ ಗಣೇಶಪ್ಪ, ಅಣ್ಣ ಬೈರೇಗೌಡ ಸೇರಿದಂತೆ ಹಲವು ಕುಟುಂಬಸ್ಥರ ವಿರುದ್ಧ ಕೇಸು ದಾಖಲಾಗಿದೆ.

ಕೋವಿಡ್ ಕೇರ್ ಸೆಂಟರ್ ಕೂಡಾ ಆಗಿರುವ, ಚಿಕ್ಕಬಳ್ಳಾಪುರ ನಗರದ ಹಳೆಯ ಜಿಲ್ಲಾಸ್ಪತ್ರೆಯ ಬಳಿ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯ ಎಎಸ್‌ಐ ಮುರಳೀಧರ್ ಕರ್ತವ್ಯದಲ್ಲಿದ್ದರು. ವೇಳೆಗೆ ಗುಂಪು ಕಟ್ಟಿಕೊಂಡು ಬಂದ ಮೃತರ ಬಂಧುಗಳು, ಏಕಾಏಕಿ ಆಸ್ಪತ್ರೆಯ ಆವರಣಕ್ಕೆ ನುಗ್ಗಿದರಲ್ಲದೇ, ಆಸ್ಪತ್ರೆಯ ವೈದ್ಯರಿಗೆ ಮತ್ತು ಸಚಿವ ಡಾ. ಸುಧಾಕರ್ ಅವರಿಗೆ ಅವಾಚ್ಯ ಶಬ್ಧಗಳನ್ನು ಬಳಸಿ, ಬೊಬ್ಬೆ ಹಾಕಿದ್ದರು ಎಂದು ಎಎಸ್ಐ ತಿಳಿಸಿದ್ದಾರೆ.

ಇದು ಕೋವಿಡ್ ಆಸ್ಪತ್ರೆ, ಸಾರ್ವಜನಿಕರಿಗೆ ಪ್ರವೇಶವಿಲ್ಲ ಎಂದು ಹೇಳಿ ಕರ್ತವ್ಯದಲ್ಲಿದ್ದ ಎಎಸ್ಐ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಅವರನ್ನು ತಡೆದರೂ ಕೇಳದೇ ತಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರು. ಮಾಸ್ಕ್ ಕೂಡಾ ಧರಿಸಿರಲಿಲ್ಲ, ದೈಹಿಕ ಅಂತರವನ್ನೂ ಪಾಲಿಸಿರಲಿಲ್ಲ ಎಂದು ಎಎಸ್ಐ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು