ಕೋವಿಡ್ ಸಂದಿಗ್ಧತೆಯ ನಡುವೆಯೂ ಮುಂದುವರಿಯುತ್ತಿರುವ ರೈತ ಚಳವಳಿ | ಸಾವಿರಾರು ರೈತರು ಮತ್ತೆ ದಿಲ್ಲಿಗೆ ದೌಡು

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ದೇಶಾದ್ಯಂತ ಕೋವಿಡ್ ಸಂದಿಗ್ಧತೆಯು ತಲೆದೂರಿದ್ದರೂ ರೈತ ಚಳವಳಿಯು ಮುಂದುವರಿಯುತ್ತಿದೆ. ಸಾವಿರಾರು ಮಂದಿ ರೈತರು ಮತ್ತೆ ದೆಹಲಿಗೆ ದೌಡಾಯಿಸಿದ್ದಾರೆ.

ಭಾರತೀಯ ಕಿಸಾನ್ ಯೂನಿಯನ್ ಸಂಘವು ಫಿರ್ ದಿಲ್ಲಿ ಚಲೋ (ಮತ್ತೆ ದೆಹಲಿಯತ್ತ ಸಾಗಿ) ಎಂಬ ಅಭಿಯಾನದ ಮುಂದಾಳತ್ವ ವಹಿಸಿದೆ. ಅಭಿಯಾನದ ಭಾಗವಾಗಿ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಮಂದಿ ರೈತರು ದೆಹಲಿಯತ್ತ ಸಾಗಿದ್ದಾರೆ.

ಸುಧೀರ್ಘ ರೈತ ಹೋರಾಟವು ಮುಂದುವರಿಯುತ್ತಿರುವ ನಡುವೆ ಸುಗ್ಗಿಯ ಸಮಯ ಬಂದಾಗ, ರೈತರು ಗಣನೀಯ ಸಂಖ್ಯೆಯಲ್ಲಿ ತಮ್ಮ ಊರಿಗೆ ಮರಳಿದ್ದರು. ಇದೀಗ ಸುಗ್ಗಿಯ ಸಮಯ ಮುಗಿದ ಸನ್ನಿವೇಶದಲ್ಲಿ ರೈತ ಹೋರಾಟಗಾರರು ಮತ್ತೆ ‘ಟಿಕ್ರಿಯೂ ಸೇರಿದಂತೆ ದೆಹಲಿ ಗಡಿಗಳತ್ತ  ಹಿಂದಿರುಗುತ್ತಿದ್ದಾರೆ.  ಮಹಿಳೆಯರೂ ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಂಡಿದ್ದಾರೆ.

ಬಿಕೆಯು (ಉಗ್ರಾನ್‌) ಅಧ್ಯಕ್ಷ ಜೋಗಿಂದರ್‌ ಸಿಂಗ್‌ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಹಲವಾರು ಪ್ರಮುಖ ರೈತ ನಾಯಕರೂ ಭಾಗವಹಿಸುತ್ತಿದ್ದಾರೆ.

ಐತಿಹಾಸಿಕ ರೈತ ಚಳವಳಿಯು ಪ್ರಾರಂಭವಾಗಿ ಈಗಾಗಲೇ ಐದು ತಿಂಗಳು ಕಳೆದಿದ್ದು, ಕರಾಳ ಕೃಷಿ ಕಾನೂನನ್ನು ಹಿಂಪಡೆಯುವವರೆಗೆ ಪ್ರತಿಭಟನೆಯನ್ನು ಮುಂದುವರಿಸಲು ರೈತರು ನಿರ್ಧರಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು