ಕೋವಿಡ್ ಸಹಾಯವಾಣಿಗೆ ಕರೆ ಮಾಡಿದಾಗ ‘ಹೋಗಿ ಸಾಯಿ’ ಎಂಬ ಪ್ರತಿಕ್ರಿಯೆ! ಹದಗೆಟ್ಟು ಹೋದ ಉತ್ತರ ಪ್ರದೇಶದ ಪರಿಸ್ಥಿತಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಲಕ್ನೋ: ದೇಶಾದ್ಯಂತ ಕೋವಿಡ್ ಮಹಾಮಾರಿಯು ತೀವ್ರವಾಗಿ ಹರಡುತ್ತಿರುವ ಸಮಯದಲ್ಲಿ ಇಡೀ ದೇಶಕ್ಕೆ ದೇಶವೇ ಆತಂಕದಲ್ಲಿದೆ. ಪ್ರತಿಯೊಂದು ರಾಜ್ಯಗಳ ಆರೋಗ್ಯ ಕಾರ್ಯಕರ್ತರು ಆದಷ್ಟು ಹೆಚ್ಚು ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆದರೆ ಉತ್ತರ ಪ್ರದೇಶದಲ್ಲಿ ರೋಗಿಯೊಬ್ಬರು ಕೋವಿಡ್ ಸಹಾಯವಾಣಿಗೆ ಕರೆ ಮಾಡಿದಾಗಹೋಗಿ ಸಾಯಿಎಂಬ ವಿಲಕ್ಷಣ ಪ್ರತಿಕ್ರಿಯೆ ನೀಡಲಾಗಿದೆ. ಹೌದು.. ಸಂತೋಷ್ ಕುಮಾರ್ ಎಂಬ ಕೋವಿಡ್ ರೋಗಿ ಮತ್ತು ಕೋವಿಡ್ ಕಮಾಂಡ್ ಸೆಂಟರ್ ಪ್ರತಿನಿಧಿಯ ನಡುವಿನ ದೂರವಾಣಿ ಸಂಭಾಷಣೆಯು ಇದೀಗ ಸೋರಿಕೆಯಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ವಿವಾದಕ್ಕೂ ಕಾರಣವಾಗಿದೆ.

ಎಪ್ರಿಲ್ ಹತ್ತರಂದು ಸಂತೋಷ್ ಕುಮಾರ್ ಹಾಗೂ ಅವರ ಪತ್ನಿ ಕೋವಿಡ್ ಪರೀಕ್ಷೆ ನಡೆಸುತ್ತಾರೆ. ಬಳಿಕ ಅವರು ತಮ್ಮ ಮನೆಯಲ್ಲಿಯೇ ಕ್ವಾರಂಟೈನಿಗೆ ಒಳಗಾಗುತ್ತಾರೆ. ಎಪ್ರಿಲ್ ಹನ್ನೆರಡಕ್ಕೆ ಇಬ್ಬರಿಗೂ ಕೋವಿಡ್ ಪೊಸಿಟಿವ್ ಎಂಬ ಫಲಿತಾಂಶ ಬರುತ್ತದೆ. ನಂತರ ಅವರು ಕೋವಿಡ್ ಕಮಾಂಡ್ ಸೆಂಟರಿಗೆ ಕರೆ ಮಾಡುತ್ತಾರೆ. ಎಪ್ರಿಲ್ ಹದಿನೈದರಂದು ಮುಂಜಾನೆ 8: 15 ಕ್ಕೆ ಕೋವಿಡ್ ಸಹಾಯವಾಣಿಯಿಂದ ತಿರುಗಿ ಕರೆ ಬರುತ್ತದೆ.

ಕರೆ ಮಾಡಿದ ಸಹಾಯವಾಣಿ ಪ್ರತಿನಿಧಿಯು, ಕ್ವಾರಂಟೈನಿನಲ್ಲಿರುವವರು ಹೊಂದಿರಬೇಕಾದ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡಿದ್ದೀರಾ ಎಂದು ಪ್ರಶ್ನಿಸುತ್ತಾರೆ. ಅಂತಹ ಆ್ಯಪ್ ಬಗ್ಗೆ ನನಗೆ ತಿಳಿದಿಲ್ಲ ಎಂದು ಕೋವಿಡ್ ರೋಗಿಯು ಹೇಳಿದಾಗ, ಸಹಾಯವಾಣಿ ಪ್ರತಿನಿಧಿಯಿಂದಹೋಗಿ ಸಾಯಿ…’ ಎಂಬ ಉತ್ತರ ಬಂದಿದೆ. ಇಂಡಿಯಾ ಟುಡೇ ಇದನ್ನು ವರದಿ ಮಾಡಿದೆ.

ಆಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಂತೋಷ್ ಕುಮಾರ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಲಕ್ನೋ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಭಿಷೇಕ್ ಪ್ರಕಾಶ್ ಅವರಿಗೆ ಪತ್ರ ಬರೆದು ಸ್ಪಷ್ಟೀಕರಣ ಕೇಳಿದ್ದಾರೆ.

ಕೋವಿಡ್ ರೋಗಿಯಾಗಿರುವ ಸಂತೋಷ್ ಕುಮಾರ್, ಲಕ್ನೋದ ಮಹಾನಗರ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಮನೋಹರ್ ಸಿಂಗ್ ಅವರ ಮಗನಾಗಿದ್ದಾನೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು