ಕೋವಿಡ್ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾದ ಮೋದಿ ರಾಜೀನಾಮೆ ನೀಡಬೇಕು : ಮಮತಾ ಬ್ಯಾನರ್ಜಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೊಲ್ಕತ್ತಾ: ದೇಶದಲ್ಲಿ ತೀವ್ರವಾಗಿ ಏರುತ್ತಿರುವ ಕೊರೋನಾ ಮಹಾಮಾರಿಯನ್ನು ನಿಯಂತ್ರಿಸಲು ನರೇಂದ್ರ ಮೋದಿ ಸಂಪೂರ್ಣ ವಿಫಲರಾಗಿದ್ದಾರೆ. ಹಿನ್ನೆಲೆಯಲ್ಲಿ ಮೋದಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.

ದೇಶದಲ್ಲಿ ಲಸಿಕೆಯ ತೀವ್ರ ಕೊರತೆ ಕಾಡುತ್ತಿದೆ. ಅದರ ನಡುವೆಯೂ ಇತರ ದೇಶಗಳಿಗೆ ವಿತರಣೆ ಮಾಡಿದ್ದಾರೆ. ಪಶ್ಚಿಮಬಂಗಾಳ ಸೇರಿದಂತೆ ಎಲ್ಲೆಡೆಯೂ ಲಸಿಕೆಯ ಕೊರತೆ ಕಾಡುತ್ತಿದೆ. ಆದರೆ ಮೋದಿಗೆ ಜಾಗತಿಕವಾಗಿ ಗುರುತಿಸಿಕೊಳ್ಳಬೇಕು ಎನ್ನುವ ಚಪಲವಿದೆ ಎಂದು ಮಮತಾ ಹೇಳಿದರು.

ದೇಶದಲ್ಲಿ ಆಮ್ಲಜನಕದ ಕೊರತೆಯೂ ಕಾಡುತ್ತಿದೆ. ಇದೆಲ್ಲವನ್ನೂ ಕಾಣದ ಮೋದಿ, ಜಗತ್ತಿನ ಎಂಭತ್ತು ದೇಶಗಳಿಗೆ ಲಸಿಕೆ ಹಂಚಿದ್ದಾರೆ. ಗುಜರಾತ್ ಸೇರಿದಂತೆ ಹಲವು  ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕೋವಿಡ್ ಪರಿಸ್ಥಿತಿಯನ್ನು ನಿಯಂತ್ರಿಸಲು ಸರಕಾರವು ಸಂಪೂರ್ಣ ವಿಫಲವಾಗಿದೆ ಎಂದರು.

ರಾಜ್ಯದ ನಾಗರಿಕರಿಗೆ ಉಚಿತವಾಗಿ ಹಂಚಲು 5.4 ಕೋಟಿ ಡೋಸ್ ಲಸಿಕೆಗಳನ್ನು ನೀಡಬೇಕೆಂದು ಪಶ್ಚಿಮ ಬಂಗಾಳ ಸರಕಾರವು ಕೇಂದ್ರವನ್ನು ಕೇಳಿಕೊಂಡಿತ್ತು. ಆದರೆ ಕೇಂದ್ರ ಸರಕಾರದಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿದಿಲ್ಲವೆಂದು ಮಮತಾ ಆರೋಪಿಸಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು