ಗುಜರಾತ್: ಕೋವಿಡಿನಿಂದ ಚೇತರಿಸಿಕೊಂಡವರಲ್ಲಿ ಅಪಾಯಕಾರಿ ಸೋಂಕು ಪತ್ತೆ! ಬ್ಲಾಕ್, ವೈಟ್, ಯೆಲ್ಲೋ ಬಳಿಕ ಇದೀಗ ʼಆಸ್ಪರ್ಜಿಲೊಸಿಸ್’

Share on facebook
Share on twitter
Share on linkedin
Share on whatsapp
Share on telegram
Share on email
Share on print

ವಡೋದರ: ಕೋವಿಡ್ ಎರಡನೇ ಅಲೆಯ ಬಳಿಕ ಜನಸಾಮಾನ್ಯರು ವೈರಸ್, ಶಿಲೀಂಧ್ರಗಳ ಹೊಸ ಹೊಸ ಹೆಸರುಗಳನ್ನು ಕೇಳಿ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಇವುಗಳ ಹೆಸರುಗಳನ್ನು ಕೇಳಿದ ಕೆಲವರು ಆತಂಕ ವ್ಯಕ್ತಪಡಿಸಿದರೆ, ಇನ್ನು ಕೆಲವರು ಹಾಸ್ಯಭಾವದಿಂದ ನೋಡಿ, ಇದೇನಪ್ಪಾ ಚಿತ್ರವಿಚಿತ್ರ ಹೆಸರುಗಳು ಎನ್ನುತ್ತಿದ್ದಾರೆ.

ಸಾಲಿಗೆ ಇದೀಗ ಹೊಸ ಹೆಸರೊಂದು ಸೇರ್ಪಡೆಯಾಗಿದೆ. ಗುಜರಾತಿನಲ್ಲಿʼಆಸ್ಪರ್ಜಿಲೊಸಿಸ್ಎಂಬ ಸೋಂಕು ಪತ್ತೆಯಾಗಿದೆ. ಇದು ಕೋವಿಡಿನಿಂದ ಚೇತರಿಸಿಕೊಂಡವರಲ್ಲಿ ಕಾಣಿಸಿಕೊಂಡಿರುವುದು ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ.

ಕಳೆದೊಂದು ವಾರದಿಂದ ವಡೋದರಾದ ಎಸ್‍ಎಸ್‍ಜಿ ಆಸ್ಪತ್ರೆಯಲ್ಲಿ ಸುಮಾರು ಎಂಟರಷ್ಟು ಜನರಲ್ಲಿ ಆಸ್ಪರ್ಜಿಲೊಸಿಸ್ ರೋಗದ ಲಕ್ಷಣಗಳು ಕಂಡು ಬಂದಿದೆ. ರೋಗವೂ  ಕೂಡಾ ಅತಿಯಾದ ಸ್ಟಿರಾಯ್ಡ್ ಔಷಧಗಳ ಬಳಕೆ, ಅಸಮರ್ಪಕ ರೀತಿಯಲ್ಲಿಆಮ್ಲಜನಕನೀಡುವುದು ಇತ್ಯಾದಿಗಳಿಂದ ಉಂಟಾಗುವುದೆಂದು ಹೇಳಲಾಗಿದೆ.

ಮಧುಮೇಹವಿರುವ ಕೋವಿಡ್ ರೋಗಿಗಳಿಗೆ ಸ್ಟಿರಾಯ್ಡುಗಳನ್ನು ನೀಡಿರುವುದು, ಕೋವಿಡ್ ಕಾರಣದಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಕುಂಠಿತಗೊಂಡಿರುವುದು ಕೂಡಾ ಇಂತಹ ಅಪಾಯಕಾರಿ ಶಿಲೀಂಧ್ರಗಳು ಬೆಳೆಯಲು ಕಾರಣವೆಂದು ವಡೋದರ ನಗರದ ವೈದ್ಯ ಡಾ. ಮಿಸ್ತ್ರಿ ಹೇಳುತ್ತಾರೆ.

ಹೊಸದಾಗಿ ಪತ್ತೆಯಾದ ಫಂಗಸುಗಳು, ಬ್ಲಾಕ್ ಫಂಗಸಿನಷ್ಟು ಅಪಾಯಕಾರಿ ಅಲ್ಲವೆಂದು ಅವರು ತಿಳಿಸಿದ್ಧಾರೆ. ಗುಜರಾತಿನಲ್ಲಿ ಇದುವರೆಗೆ 262 ಬ್ಲಾಕ್ ಫಂಗಸ್ ಪ್ರಕರಣಗಳು ವರದಿಯಾಗಿದೆ. ಆಸ್ಪರ್ಜಿಲೊಸಿಸ್ ಒಂದು ಸಾಂಕ್ರಾಮಿಕ ರೋಗವಲ್ಲದಿದ್ದರೂ, ಸಾಂಕ್ರಾಮಿಕ ರೋಗವಾದ ಕೋವಿಡ್ ತಗುಲಿದವರಲ್ಲೂ, ಚೇತರಿಸಿಕೊಂಡವರಲ್ಲೂ ಕಂಡುಬಂದಿರುವುದು ಸಮಸ್ಯೆಯೆನಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು