ಕೋವಿಡ್ ಕಾರಣದಿಂದ ಅನಾಥರಾದ ಮಕ್ಕಳನ್ನು ದತ್ತು ಪಡೆದ ಪಂಜಾಬ್ ಸರಕಾರ | ಉಚಿತ ಶಿಕ್ಷಣ, ಮಾಸಿಕ ಧನ ಸಹಾಯ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಚಂದಿಗಢ್: ಕೋವಿಡ್ ಸಾಂಕ್ರಾಮಿಕದಿಂದಾಗಿ ಹೆತ್ತವರನ್ನು ಕಳೆದುಕೊಂಡ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಪಂಜಾಬ್ ಸರಕಾರವು ನಿರ್ಧರಿಸಿದೆ.

ಅಂತಹ ಮಕ್ಕಳಿಗೆ ಪದವಿ ಶಿಕ್ಷಣದ ವರೆಗೆ ಉಚಿತವಾದ ಶಿಕ್ಷಣ ಮತ್ತು ಮಾಸಿಕ ‍1500 ರೂಪಾಯಿಗಳ ಧನ ಸಹಾಯವನ್ನೂ ನೀಡಲು ತೀರ್ಮಾನಿಸಿದೆ. ಪಂಜಾಬ್ ಸರಕಾರವು ಅನಾಥ ಮಕ್ಕಳ ಪಾಲಿಗೆ ಸಾಕು ತಂದೆಯಾಗಲು ಉದ್ಧೇಶಿಸಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹೇಳಿದ್ದಾರೆ.

ಅದೇ ರೀತಿ ಏಕೈಕ ಆಧಾರ ಸ್ತಂಭವನ್ನು ಕಳೆದುಕೊಂಡು ಕಷ್ಟಪಡುತ್ತಿರುವ ಕುಟುಂಬಗಳಿಗೂ ಮಾಸಿಕ ಧನ ಸಹಾಯವನ್ನು ನೀಡಲೂ ಪಂಜಾಬ್ ಸರಕಾರವು ಯೋಜನೆ ಹಾಕಿಕೊಂಡಿದೆ. ಜುಲೈ ಒಂದರಿಂದ ಎಲ್ಲಾ ಯೋಜನೆಗಳೂ ಕಾರ್ಯರೂಪಕ್ಕೆ ಬರಲಿದೆ.

ಅನಾಥರಿಗೆ ಇಪ್ಪತ್ತೊಂದು ವಯಸ್ಸು ಪೂರ್ತಿಯಾಗುವ ವರೆಗೂ, ಆಧಾರ ಸ್ತಂಭವನ್ನು ಕಳೆದುಕೊಂಡ ಕುಟುಂಬಿಕರಿಗೆ ಮುಂದಿನ ಮೂರು ವರ್ಷಗಳ ವರೆಗೂ ಸರಕಾರದ ನೆರವು ಸಿಗಲಿದೆ. ಈ ಅವಧಿ ಮುಗಿದ ಏನು ಮಾಡಬೇಕೆಂದು ಆಗಿನ ಪರಿಸ್ಥಿತಿ ಅವಲೋಕಿಸಿ, ಮುಂದಿನ ಹೆಜ್ಜೆಯಿಡಲಾಗುವುದೆಂದು ಮುಖ್ಯಮಂತ್ರಿ ಕಛೇರಿ ಮೂಲಗಳು ತಿಳಿಸಿವೆ.

ಕೋವಿಡ್ ಬಾಧಿತ ಕುಟುಂಬಕ್ಕೆ 51,000 ಅನುದಾನ, ಉಚಿತ ಆಹಾರ ಸಾಮಾಗ್ರಿ ಮತ್ತು ಉದ್ಯೋಗ ಪಡೆಯಲು ಸಹಾಯ ಮುಂತಾದ ಕಾರ್ಯಯೋಜನೆಗಳನ್ನು ಪಂಜಾಬ್ ಸರಕಾರವು ಈಗಾಗಲೇ ಘೋಷಿಸಿಕೊಂಡಿದೆ. ಇದು ಕೂಡಾ ಜುಲೈ ಒಂದರಿಂದ ಜಾರಿಯಾಗಲಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು