ಕೋವಿಡ್ ಮಾರ್ಗಸೂಚಿ ಉಲ್ಲಂಘನೆ : ಎರಡು ಮದುವೆ ಮಂಟಪಗಳಿಗೆ ಅನಿರೀಕ್ಷಿತ ದಾಳಿ ನಡೆಸಿ ದರ್ಪದಿಂದ ವರ್ತಿಸಿದ ಐಎಎಸ್ ಅಧಿಕಾರಿ – ವೈರಲ್ ವೀಡಿಯೋ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಅಗರ್ತಲ: ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಎರಡು ಮದುವೆ ಮಂಟಪಗಳಿಗೆ ದಾಳಿ ನಡೆಸಿ, ಜನರೊಂದಿಗೆ ದರ್ಪದೊಂದಿಗೆ ವರ್ತಿಸುವ ವೀಡಿಯೋ ತುಣುಕೊಂದು ವೈರಲ್ ಆಗಿದೆ. ಎರಡೂ ಮಂಟಪಗಳಲ್ಲಿ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಮದುವೆ ನಡೆಯುತ್ತಿತ್ತು ಎನ್ನಲಾಗಿದೆ.

ಮದುವೆ ಮಂಟಪಗಳಿಗೆ ಅನಿರೀಕ್ಷಿತವಾಗಿ ದಾಳಿ ನಡೆಸಿದ ಪಶ್ಚಿಮ ತ್ರಿಪುರ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಶೈಲೇಶ್ ಕುಮಾರ್ ಯಾದವ್, ಅಲ್ಲಿನ ಜನರೊಂದಿಗೆ ದರ್ಪದಿಂದ ವರ್ತಿಸಿದ್ದಲ್ಲದೇ, ಅವರೊಂದಿಗೆ ತಕ್ಷಣವೇ ಜಾಗ ಖಾಲಿ ಮಾಡುವಂತೆ ಆಜ್ಞಾಪಿಸಿದ್ದಾರೆ. ಜೊತೆಗೆ ವರನನ್ನೂ, ಆತನ ಸಂಬಂಧಿಕರನ್ನೂ ತಳ್ಳಿ ಹಾಕಿದ್ದಾರೆ. ಮತ್ತು ಕೆಲವರ ಕೊರಳನ್ನು ಹಿಡಿಯುವ ದೃಶ್ಯವೂ ವೀಡಿಯೋದಲ್ಲಿ ಸೆರೆಯಾಗಿದೆ.

ಕಾನೂನು ಉಲ್ಲಂಘನೆಗೆ ಸಮಜಾಯಿಷಿ ನೀಡಿ ಮಾತನಾಡುತ್ತಿರುವವರನ್ನು ಬಂಧಿಸಲು ಜೊತೆಯಲ್ಲಿರುವ ಪೋಲೀಸರಿಗೂ ಅಧಿಕಾರಿ  ಅದೇಶ ನೀಡುತ್ತಾರೆ. ಮಹಿಳೆಯೊಬ್ಬರು ಮದುವೆಯ ಅನುಮತಿ ಪತ್ರವನ್ನು ತೋರಿಸಿದಾಗ, ರಾತ್ರಿ ಹತ್ತರ ಬಳಿಕ ಯಾವ ಮದುವೆಗೂ ಅನುಮತಿ ನೀಡಿಲ್ಲ ಎಂದು, ಅದನ್ನು ಹರಿದು ಬಿಸಾಡಿದ್ದಾರೆ. ಕೆಲವರಿಗೆ ಲಾಠಿಯ ಬಡಿತ, ಇನ್ನು ಕೆಲವರಿಗೆ ಕಪಾಳ ಮೋಕ್ಷ, ನೂಕಾಟ-ಎಳೆದಾಟಗಳೂ ನಡೆದಿವೆ.

ತ್ರಿಪುರದಲ್ಲಿ ಕೋವಿಡ್ ನಿಯಂತ್ರಣದ ಭಾಗವಾಗಿ ರಾತ್ರಿ ಹತ್ತರಿಂದ ಬೆಳಿಗ್ಗೆ ಐದರ ವರೆಗೆರಾತ್ರಿ ಕರ್ಫ್ಯೂಜಾರಿಯಲ್ಲಿದ್ದು, ಹಗಲು ಸಮಯದಲ್ಲೂ ಯಾವುದೇ ಸಮಾರಂಭಕ್ಕೆ ನೂರಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ.

ಎರಡೂ ಮದುವೆಗಳುರಾತ್ರಿ ಕರ್ಫ್ಯೂಉಲ್ಲಂಘಿಸಿ, ರಾತ್ರಿ ಹತ್ತರ ನಂತರ ನಡೆದಿತ್ತೆಂದು ವರದಿಯಾಗಿದೆ. ಮದುವೆಯಲ್ಲಿ ಭಾಗವಹಿಸಿದ್ದ 19 ಮಹಿಳೆಯರೂ ಸೇರಿದಂತೆ ಒಟ್ಟು 31 ಜನರನ್ನು ಬಂಧಿಸಲಾಗಿದೆ.

ಮದುವೆಯಲ್ಲಿ ಭಾಗವಹಿಸಿದವರು ಸಾಕಷ್ಟು ಶ್ರೀಮಂತರೂ, ಉನ್ನತ ಶಿಕ್ಷಣವನ್ನು ಪಡೆದವರೂ ಆಗಿದ್ದರೂ, ಇವರು ಕಾನೂನುಗಳನ್ನು ಪಾಲಿಸುತ್ತಿಲ್ಲ. ಇನ್ನೊಂದು ಕಡೆಯಿಂದ ಕೋವಿಡ್ ತೀವ್ರಗೊಂಡ ಸಮಯದಲ್ಲಿ ಸರಕಾರ ಏನನ್ನೂ ಮಾಡುತ್ತಿಲ್ಲವೆಂದು ದೂರುತ್ತಾರೆ. ವಿಚಾರವಾಗಿ ಸರಿಯಾಗಿ ಕರ್ತವ್ಯ ನಿರ್ವಹಿಸದ ಪಶ್ಚಿಮ ತ್ರಿಪುರ ಜಿಲ್ಲೆಯ ಪೋಲೀಸ್ ಅಧಿಕಾರಿಯನ್ನು ಅಮಾನತು ಮಾಡಬೇಕಿದೆ.” ಎಂದು ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ಐಎಎಸ್ ಅಧಿಕಾರಿ ಶೈಲೇಶ್ ಹೇಳುತ್ತಾರೆ.

ಆದರೆ ಐಎಎಸ್ ಅಧಿಕಾರಿಯ ಅತಿರೇಕದ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿ ತಮ್ಮ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಡಳತಾರೂಢ ಬಿಜೆಪಿ ಪಕ್ಷದ ಶಾಸಕ ಸುಶಾಂತ್ ಚೌಧರಿ ಕೂಡಾ ಅಧಿಕಾರಿಯ ವರ್ತನೆಯನ್ನು ಖಂಡಿಸಿದ್ದಾರೆ. ಇನ್ನು ಕೆಲವರು ಅಧಿಕಾರಿಯ ನಡೆಯನ್ನು ಶ್ಲಾಘಿಸಿ, ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೂ ಇದೇ ರೀತಿ ಬಿಸಿ ಮುಟ್ಟಿಸಬೇಕೆಂದು ಕುಟುಕಿದ್ದಾರೆ.

ನಡುವೆ ಅಧಿಕಾರಿಯು ಕ್ಷಮೆ ಯಾಚಿಸಿದ್ದಾರಲ್ಲದೇ, ತಾನು ತನ್ನ ಕರ್ತವ್ಯವನ್ನಷ್ಟೇ ನಿಭಾಯಿಸಿರುತ್ತೇನೆಂಬ ಸಮಜಾಯಿಷಿಯನ್ನೂ ನೀಡಿದ್ದಾರೆ.

ವೀಡಿಯೋ ವೀಕ್ಷಿಸಿ..

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು