ಕೋವಿಡ್ ಲಸಿಕೆಗೆ ಬೇರೆ ಬೇರೆ ದರ ನಿಗದಿಪಡಿಸುವುದು ಹೇಗೆ? ರಾಷ್ಟ್ರೀಯ ವಿಪತ್ತಿನ ಸಮಯದಲ್ಲಿ ಮೂಕಸಾಕ್ಷಿಯಾಗಿ ನಿಲ್ಲಲು ಸಾಧ್ಯವಿಲ್ಲ : ಸುಪ್ರೀಮ್ ಕೋರ್ಟ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಲಸಿಕೆಗೆ ಬೇರೆ ಬೇರೆ ಬೆಲೆಗಳನ್ನು ನಿಗದಿಪಡಿಸುವುದಾದರೂ ಹೇಗೆ? ರಾಷ್ಟ್ರೀಯ ವಿಪತ್ತಿನ ಸಮಯದಲ್ಲಿ ನ್ಯಾಯಾಲಯಕ್ಕೆ ಮೂಕಸಾಕ್ಷಿಯಾಗಿ ನಿಲ್ಲಲು ಸಾಧ್ಯವಿಲ್ಲ ಎಂದು ಸುಪ್ರೀಮ್ ಕೋರ್ಟ್ ಹೇಳಿದೆ.

ರಾಜ್ಯ ಸರಕಾರಕ್ಕೆ ಒಂದು ಡೋಸ್ ಕೋವಿಶೀಲ್ಡ್ ಲಸಿಕೆಗೆ 400 ರೂಪಾಯಿಗಳಾದರೆ, ಖಾಸಗೀ ಆಸ್ಪತ್ರೆಗೆ ಡೋಸ್ ಒಂದಕ್ಕೆ 600 ರೂಪಾಯಿಗಳನ್ನು ಪುಣೆಯ ಸೀರಂ ಇಸ್ಟಿಟ್ಯೂಟ್ ಆಫ್ ಇಂಡಿಯಾ ನಿಗದಿಪಡಿಸಿದೆ.

ಭಾರತ್ ಬಯೋಟೆಕ್ ಉತ್ಪಾದಿತ ಲಸಿಕೆಗೆ ರಾಜ್ಯ ಸರಕಾರವು 600 ರೂಪಾಯಿಗಳನ್ನು ಪಾವತಿಸಬೇಕಿದೆ ಮತ್ತು ಖಾಸಗಿ ಆಸ್ಪತ್ರೆಗಳು 1200 ರೂಪಾಯಿಗಳ ವರೆಗೂ ಪಾವತಿಸಬೇಕಿದೆ. ರಫ್ತು ಮಾಡಲಾಗುವ ಲಸಿಕೆಗೆ ಹದಿನೈದರಿಂದ ಇಪ್ಪತ್ತು ಡಾಲರುಗಳ ವರೆಗೂ ಬೆಲೆ ನಿಗದಿಪಡಿಸಲಾಗಿದೆ.

ರೀತಿ ದೇಶದಲ್ಲಿ ಒಂದೇ ಲಸಿಕೆಗೆ ಮೂರು ರೀತಿಯ ಬೆಲೆಯು ಅಸ್ತಿತ್ವದಲ್ಲಿದೆ. ಕೋವಿಡ್ ಲಸಿಕೆಯ ಅಂತರಾಷ್ಟ್ರೀಯ ಬೆಲೆಗಿಂತಲೂ ಹೆಚ್ಚಿನ ಬೆಲೆಗೆ ಕಂಪೆನಿಗಳು ದೇಶದೊಳಗೆ ಮಾರುತ್ತಿವೆ.

ಕಂಪೆನಿಗಳು ಹೆಚ್ಚು ಬೆಲೆ ನಿಗದಿಪಡಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕೂಡಾ ಸೀರಂ ಇನ್ಸ್ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಕಂಪೆನಿಗಳ ಜೊತೆಗೆ ಬೆಲೆ ಇಳಿಸಬೇಕೆಂದು ಕೇಳಿಕೊಂಡಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು