ಲಸಿಕೆ ಪಡೆದಿದ್ದರೂ ಕೋವಿಡ್ ತಗುಲಿ ವೈದ್ಯರ ಮರಣ

Share on facebook
Share on twitter
Share on linkedin
Share on whatsapp
Share on telegram
Share on email
Share on print

 

ನವದೆಹಲಿ: ಲಸಿಕೆ ಪಡೆದಿದ್ದರೂ ಕೋವಿಡ್ ತಗುಲಿ ವೈದ್ಯರೊಬ್ಬರು ಸಾವಿಗೀಡಾದ ಘಟನೆ ನಡೆದಿದೆ. ದೆಹಲಿಯ ಸರೋಜ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ. ಅನಿಲ್ ಕುಮಾರ್ ರಾವತ್ ಎಂಬವರೇ ಕೋವಿಡ್ ತಗುಲಿ ಮೃತಪಟ್ಟವರು.

ಡಾ. ಅನಿಲ್ ಕುಮಾರ್ ರಾವತ್ ಅವರಿಗೆ ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸುಗಳನ್ನು ಕೊಡಲಾಗಿತ್ತು. ಕೊನೆಯವರೆಗೂ ತನಗೇನೂ ಆಗದು, ಕೋವಿಡಿನಿಂದ ಗುಣಮುಕ್ತನಾಗಿ ಬರುವೆ ಎಂಬ ಆತ್ಮವಿಶ್ವಾಸದಲ್ಲೇ ಅವರಿದ್ದರು ಎಂದು ಅವರ ಸಹೋದ್ಯೋಗಿಗಳು ತಿಳಿಸಿದ್ದಾರೆ.

ಸರಿ ಸುಮಾರು 10-12 ದಿನಗಳ ಮೊದಲು ಅವರಿಗೆ ಕೋವಿಡ್ ತಗುಲಿರುವುದು ದೃಢವಾಗಿತ್ತು. ನಂತರ ತನ್ನ ಮನೆಯಲ್ಲಿಯೇ ಕ್ವಾರಂಟೈನಿಗೆ ಒಳಗಾಗಿದ್ದರು. ಆದರೆ ಕೊನೆಯ ಎರಡು ದಿನಗಳಲ್ಲಿ ಅವರ ದೇಹದಲ್ಲಿನ ಆಕ್ಸಿಜನ್ ಮಟ್ಟವು ಇಳಿಕೆಯಾಗುತ್ತಾ ಬಂತು. ಪರಿಸ್ಥಿತಿಯು ಬಿಗಡಾಯಿಸಿದಾಗ ಆಸ್ಪತ್ರೆಗೂ ದಾಖಲು ಮಾಡಲಾಯಿತು.

ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸೌಲಭ್ಯವನ್ನು ಒದಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇವರಿಗೆ 58 ವರ್ಷ ವಯಸ್ಸಾಗಿತ್ತು. ದೆಹಲಿಯ ಮೌಲಾನಾ ಅಝಾದ್ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಇವರು, ಹಲವಾರು ವರ್ಷಗಳಿಂದ ಸರೋಜ ಆಸ್ಪತ್ರೆಯಲ್ಲಿ ಸರ್ಜನ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಮೊದಲೂ ಕೋವಿಡ್ ಲಸಿಕೆ ಪಡೆದ ಹಲವರಿಗೆ ಕೋವಿಡ್ ತಗುಲಿರುವುದು ವರದಿಯಾಗಿದೆ. ಆದರೆ ಅಂಥವರಿಗೆ ರೋಗವು ಅಷ್ಟೊಂದು ತೀವ್ರವಾಗಿ ಕಾಡಿರಲಿಲ್ಲ. ರೋಗದಿಂದ ಬಲು ಬೇಗನೇ ಮುಕ್ತರಾಗುತ್ತಿದ್ದರು. ಆದರೆ ರೀತಿ ಲಸಿಕೆ ಪಡೆದಿದ್ದರೂ ಕೋವಿಡಿಗೆ ಬಲಿಯಾಗಿರುವುದು ಇದು ಮೊದಲನೇ ಬಾರಿ ಎಂದು ಅವರ ಸಹೋದ್ಯೋಗಿಗಳು ಹೇಳುತ್ತಾರೆ.

ದೆಹಲಿಯಾದ್ಯಂತ ಈ ವರೆಗೆ ಒಟ್ಟು 37,46,494 ಜನರಿಗೆ ಲಸಿಕೆ ಹಾಕಲಾಗಿದೆ. ಅದರಲ್ಲಿ 8,21,786 ಜನರು ಎರಡೂ ಡೋಸುಗಳು ಪಡೆದವರಾಗಿದ್ದಾರೆ. ಹೆಚ್ಚಿನವರು ಕೋವಿಶೀಲ್ಡ್ ಲಸಿಕೆಯನ್ನೇ ಪಡೆದವರೆಂದು ದಾಖಲೆಗಳು ಸೂಚಿಸುತ್ತಿವೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು